ಸಹಕಾರ ಬ್ಯಾಂಕ್‌ನಲ್ಲಿ ಸ್ಯಾನಿಟೈಸರ್ ಯಂತ್ರ

21mdkj6
Published on

ಕುಶಾಲನಗರ: ಸದಸ್ಯರ ಮತ್ತು ಗ್ರಾಹಕರ ಆರೋಗ್ಯದ ಹಿತದೃಷ್ಟಿಯಿಂದ ಕುಶಾಲನಗರ ಬೈಪಾಸ್ ರಸ್ತೆಯಲ್ಲಿರುವ ಮರ್ಚೆಂಟ್ಸ್ ಇಂಡಸ್ಟ್ರಿಯಲಿಸ್ಟ್ ಕೋ-ಆಪರೇಟಿವ್ ಬ್ಯಾಂಕ್ ಇಡೀ ದೇಹಕ್ಕೆ ಸ್ಯಾನಿಟೈಸ್ ಮಾಡುವ ಯಂತ್ರ ಅಳವಡಿಸಿ ಪ್ರಶಂಸೆಗೆ ಪಾತ್ರವಾಗಿದೆ.

ಈ ಯಂತ್ರವನ್ನು ದಾಟಿ ಮುಂದೆ ಬಂದರೆ ಕೈಗಳಿಗೆ ಸ್ಯಾನಿಟೈಸರ್ ನೀಡುವ ಮತ್ತೊಂದು ಯಂತ್ರ ಅಳವಡಿಸಲಾಗಿದೆ. ಪ್ರತಿ 2 ಗಂಟೆಗೊಮ್ಮೆ ಇಡೀ ಬ್ಯಾಂಕ್ ಕಚೇರಿ ಹೈಡ್ರೋಕ್ಲೋರೈಡ್ ಸಿಂಪಡಿಸಿ ಸಿಬ್ಬಂದಿ ಜತೆಗೆ ಗ್ರಾಹಕರೂ ಕೂಡ ಕೋವಿಡ್-19 ಸೋಂಕಿನಿಂದ ದೂರವಿಡುವ ಪ್ರಯತ್ನವನ್ನು ಆಡಳಿತ ಮಂಡಳಿ ಮಾಡುತ್ತಿದೆ.

ಸಿಬ್ಬಂದಿ ಮುಖಕ್ಕೆ ಮಾಸ್ಕ್ ಮತ್ತು ಕೈಗಳಿಗೆ ಗ್ಲೌಸ್ ಹಾಕಿಕೊಂಡಿರುತ್ತಾರೆ. ಗ್ರಾಹಕರು ಮಾಸ್ಕ್ ಧರಿಸಿದ್ದರೆ ಮಾತ್ರ ಒಳಗೆ ಪ್ರವೇಶ ನೀಡಲಾಗುತ್ತಿದೆ.

ಸಂಸ್ಥೆ ಅಧ್ಯಕ್ಷ ಟಿ.ಆರ್.ಶರವಣಕುಮಾರ್ ಮಾತನಾಡಿ, ಸದಸ್ಯರ ಯೋಗಕ್ಷೇಮ ನಮಗೆ ಬಹಳ ಮುಖ್ಯವಾದುದ್ದು. ಅದಕ್ಕೆ ಬೇಕಾದ ಅಗತ್ಯ ಜಾಗ್ರತೆಯನ್ನು ಸಂಸ್ಥೆಯಲ್ಲಿ ಅಳವಡಿಸಿಕೊಂಡಿದ್ದೇವೆ. ಸದಸ್ಯರಿಗೆ ಉತ್ತಮ ದರ್ಜೆಯ ಮಾಸ್ಕ್ ಉಚಿತವಾಗಿ ನೀಡಿ, ಅದನ್ನು ಬಳಸುವಂತೆ ತಾಕೀತು ಮಾಡಲಾಗುತ್ತಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net