

ಮದ್ದೂರು: ಕರ್ನಾಟಕ ರಾಜ್ಯ ಮಹಾಮಂಡಳ ಮತ್ತು ಮಂಡ್ಯ ಜಿಲ್ಲಾ ಸಹಕಾರ ಸಹಕಾರ ಯೂನಿಯನ್ ವತಿಯಿಂದ ‘ಸಹಕಾರ ಚಳವಳಿ ಮತ್ತು ಯುವ ನಾಯಕತ್ವ’ ಎಂಬ ವಿಷಯ ಕುರಿತು ಮಂಡ್ಯದಲ್ಲಿ ಆಯೋಜಿಸಿದ್ದ ಪಟ್ಟಣದ ಶಿವಪುರ ಪೂರ್ಣಪ್ರಜ್ಞಾ ಶಾಲೆಯ ವಿದ್ಯಾರ್ಥಿನಿ ಟಿ.ಸಾನಿಕಾ ಜಿಲ್ಲೆಗೆ ಪ್ರಥಮ ಸ್ಥಾನ ಪಡೆಯುವ ಮೂಲಕ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ವಿದ್ಯಾರ್ಥಿನಿ ಸಾಧನೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಕಾಳೀರಯ್ಯ, ಶಾಲೆ ಅಧ್ಯಕ್ಷೆ ಕಸ್ತೂರಿ, ಕಾರ್ಯದರ್ಶಿ ಅನಂತೆಗೌಡ ಪ್ರಶಂಸಿಸಿದ್ದಾರೆ.