

ಕುಶಾಲನಗರ:
ಕೂಡಿಗೆಯಲ್ಲಿರುವ ಕೊಡಗು ಸೈನಿಕ ಶಾಲೆಯ ವಿದ್ಯಾರ್ಥಿಗಳಿಗೆ ಜಿಲ್ಲೆಗೆ ಅಗಮಿಸಿರುವ ಎನ್. ಡಿ.ಆರ್. ಎಫ್ . ತಂಡದವರಿAದ ವಿಪತ್ತು ನಿರ್ವಹಣೆ ಕುರಿತು ಶನಿವಾರ ಸಮಗ್ರ ಮಾಹಿತಿಯನ್ನು ನೀಡಲಾಯಿತು.
ತಂಡದ ವೃತ್ತ ನಿರೀಕ್ಷಕ ಅಜಯ್ ಕುಮಾರ್ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ತಂಡದ ಮುಖ್ಯಸ್ಥ ಸ್ವಾಮಿ ಅವಘಡ ಸಂಬAಧಿಸಿದ ಸಂದರ್ಭ ಅತಿ ತುರ್ತಾಗಿ ಕೈಗೊಳ್ಳುವ ಪ್ರಥಮ ಹಂತದ ಕಾರ್ಯಾಚರಣೆ ಬಗ್ಗೆ ಮತ್ತು ಯಾವುದೇ ವಿಪತ್ತುಗಳನ್ನು ಯಶಸ್ವಿಯಾಗಿ ನಿರ್ವಹಿಸುವ ಬಗ್ಗೆ, ವಿವಿಧ ಹಂತಗಳಲ್ಲಿ ನಿರ್ವಹಣೆ ಮಾಡಲು ಅನುಸರಿಸಬಹುದಾದ ಸಮಗ್ರವಾದ ಮಾಹಿತಿಯನ್ನು ತಿಳಿಸಿದರು.
ಈ ಸಂದರ್ಭದಲ್ಲಿ ಸೈನಿಕ ಶಾಲೆಯ ಪ್ರಾಂಶುಪಾಲರು, ಆಡಳಿತ ವರ್ಗ, ಶಿಕ್ಷಕರ ವೃಂದ ಹಾಜರಿದ್ದರು.