ಆ.27ಕ್ಕೆ ಸಂಗೊಳ್ಳಿ ರಾಯಣ್ಣ ಉತ್ಸವ ಆಚರಣೆ

udp-rayanna
Published on

ಉಡುಪಿ: ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ವತಿಯಿಂದ 227ನೇ ರಾಯಣ್ಣ ಉತ್ಸವ ಆ. 27ರಂದು ಬೆಳಿಗ್ಗೆ 9.30ರಿಂದ ಬನ್ನಂಜೆ ಶ್ರೀ ನಾರಾಯಣ ಗುರು ಅಡಿಟೋರಿಯಂನಲ್ಲಿ ನಡೆಯಲಿದೆ ಎಂದು ಅಧ್ಯಕ್ಷ ಸಿದ್ಧಬಸಯ್ಯ ಸ್ವಾಮಿ ಚಿಕ್ಕಮಠ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸಭಾ ಕಾರ್ಯಕ್ರಮದಲ್ಲಿ ಬೈಲಹೊಂಗಲದ ದುರ್ಗಾದೇವಿ ದೇವಸ್ಥಾನದ ಧರ್ಮದರ್ಶಿ ಶ್ರೀ ಮಹಾಂತಯ್ಯ ಸ್ವಾಮಿಗಳು ಆಶೀರ್ವಚನ ನೀಡಲಿದ್ದಾರೆ. ಸಮಾರಂಭವನ್ನು ಉಡುಪಿ ವಿಧಾನಸಭಾ ಕ್ಷೇತ್ರದ ಶಾಸಕ ಯಶ್​ ಪಾಲ್​ ಸುವರ್ಣ ಉದ್ಘಾಟಿಸಲಿದ್ದಾರೆ. ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್​, ಬಾದಾಮಿ ವಿಧಾನಸಭಾ ಕ್ಷೇತ್ರದ ಶಾಸಕ ಭೀಮಸೇನ ಬಿ. ಚಿಮ್ಮನಕಟ್ಟಿ, ಮಾಜಿ ಸಚಿವ ಪ್ರಮೋದ್​ ಮಧ್ವರಾಜ್​ ಭಾಗವಹಿಸಲಿದ್ದಾರೆ ಎಂದರು.

ಸಂಸ್ಥಾಪಕ ಅಧ್ಯಕ್ಷರಾದ ಸುರೇಶ್​ ಗೋಕಾಕ್​ ರಾಯಣ್ಣ ಪುರಸ್ಕಾರವನ್ನು ಉಡುಪಿಯ ಸಮಾಜ ಸೇವಕ ಆಪತ್ಬಾಂಧವ ಈಶ್ವರ್​ ಮಲ್ಪೆ ಆವರಿಗೆ ಪ್ರದಾನ ಮಾಡಲಿದ್ದಾರೆ. ನಗರಸಭಾ ಸದಸ್ಯ ವಿಜಯ ಕೊಡವೂರು ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ತ್ರಿಷಿಕಾ ಹಿಂದುಳಿದ ಮಹಿಳಾ ಅಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷೆ ಭಾಗ್ಯಶ್ರೀ ಬಾಬಣ್ಣ, ಸಮಾಜ ಸೇವಕ ಕೃಷ್ಣಮೂರ್ತಿ ಆಚಾರ್ಯ, ಉಡುಪಿ ತುಳುಕೂಟದ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ಗೌರವಾಧ್ಯಕ್ಷ ಜನಾರ್ದನ್​ ಕೊಡವೂರು, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗ ಬಾಗಲಕೋಟೆಯ ಅಧ್ಯಕ್ಷ ಬರಮು ಪೂಜಾರಿ, ಉಡುಪಿ ಜಿಲ್ಲಾ ಶ್ರೀರಾಮ ಸೇನೆ ಅಧ್ಯಕ್ಷ ಜಯ ರಾಮ ಅಂಬೆಕಲ್ಲು, ಕನಕದಾಸ ಸಮಾಜ ಸೇವಾ ಸಂಘ ಅಧ್ಯಕ್ಷ ಹನುಮಂತ ಜಿ. ಡೊಳ್ಳಿನ, ಕರ್ನಾಟಕ ಹಾಲುಮತ ಮಹಾಸಭಾ ರಾಜ್ಯ ಸಂಚಾಲಕ ಹನುಮಂತ ಜಿ. ಗೋಡಿ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗ ದ.ಕ ಜಿಲ್ಲೆ ಕಾರ್ಯಾಧ್ಯಕ್ಷ ಮಂಜುನಾಥ ಆರ್​ ನೋಟಗಾರ್​, ಪರ್ಕಳದ ಸುಮಂಗಲ ಸ್ಟೋರ್​ ಮಾಲಕ ಪ್ರಕಾಶ್​ ಶೆಣೈ, ನ್ಯಾಚುರಲ್​ ಗ್ರಾನೈಟ್​ ಮಾಲಕ ಶ್ರೀ ನೀಲೇಶ್​ ಉಪಸ್ಥಿತರಿರುವರು ಎಂದರು.

ಬೆಳಗ್ಗೆ 11.15ಕ್ಕೆ ಕುಂಭ ಮೇಳಕ್ಕೆ ಜಿಲ್ಲಾ ಕನ್ನಡ ಮತ್ತು ಸಂಸ್ಕತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಚಾಲನೆ ನೀಡಲಿದ್ದಾರೆ. ಕುಂಭ ಮೆರವಣಿಗೆ ಶ್ರೀ ನಾರಾಯಣ ಗುರು ಅಡಿಟೋರಿಯಂ ಬನ್ನಂಜೆಯಿಂದ ಆರಂಭಗೊಂಡು ರಥ ಬೀದಿಯ ಕನಕ ಗೋಪುರದವರೆಗೆ ನಡೆಯಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಂದ ಗೌರವಾಧ್ಯಕ್ಷ ಜನಾರ್ದನ್​ ಕೊಡವೂರು, ಗೌರವ ಸಲಹೆಗಾರ ಕೃಷ್ಣ್ಣಶೆಟ್ಟಿ ಬೆಟ್ಟು, ಕಾರ್ಯಾಧ್ಯಕ್ಷ ಕುಮಾರ ಪ್ರಸಾದ್​, ಉಪಾಧ್ಯಕ್ಷ ಲಕ್ಷ್ಮಣ್​ ಕೋಲ್ಕಾರ್​, ಕಾರ್ಯದರ್ಶಿ ವಿಠ್ಠಲ್​ ಗೌಡರ್​ ಮತ್ತು ಖಜಾಂಜಿ ಪಂಪೇಶ್​ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net