

ಅಳವಂಡಿ: ಯುವಕರು ದೇಶಪ್ರೇಮಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣರ ಹೋರಾಟ ಮನೋಭಾವ, ಹಾಗೂ ಆದರ್ಶಗಳನ್ನು ಬೆಳೆಸಿಕೊಳ್ಳಬೇಕು ಎಂದು ಶಾಸಕ ರಾಘವೇಂದ್ರ ಹಿಟ್ನಾಳ ತಿಳಿಸಿದರು.
ಸಮೀಪದ ಮೋರನಹಳ್ಳಿಯಲ್ಲಿ ನಿರ್ಮಿಸಲಾದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಪ್ರತಿಮೆಯನ್ನು ಅನಾವರಣಗೊಳಿಸಿ ಭಾನುವಾರ ಮಾತನಾಡಿದರು.
ಸ್ವಾತಂತ್ರ ಸಂಗ್ರಾಮದಲ್ಲಿ ಸಂಗೊಳ್ಳಿ ರಾಯಣ್ಣ ಪಾತ್ರ ಮಹತ್ವದ್ದಾಗಿದೆ. ಬ್ರಿಟಿಷರ ವಿರುದ್ದ ದೇಶದ ಸ್ವಾತಂತ್ರಕ್ಕಾಗಿ ಹಲವಾರು ಮಹಾನ್ ನಾಯಕರು ಹೋರಾಟ ಮಾಡಿದ ಫಲವಾಗಿ ನಾವುಗಳು ಇಂದು ಆಡಳಿತ ನಡೆಸುತ್ತಾ ನೆಮ್ಮದಿಯಿಂದ ಇದ್ದೇವೆ. ಅದಕ್ಕೆ ಅವರ ತ್ಯಾಗ-ಬಲಿದಾನವೇ ಕಾರಣ ಎಂದರು.
ಇದನ್ನೂ ಓದಿ: ಹುತಾತ್ಮರ ಸ್ಮರಣೆ ಅತ್ಯಗತ್ಯ- ಬಸವಪ್ರಭು ಸ್ವಾಮೀಜಿ
ಹಾಲವರ್ತಿಯ ಕನಕಗುರುಪೀಠದ ಶ್ರೀ ಶಿವಸಿದ್ದೇಶ್ವರ ಸ್ವಾಮೀಜಿ ಮಾತನಾಡಿ, ಸ್ವಾತಂತ್ರ ಹೋರಾಟದಲ್ಲಿ ಅನೇಕ ಹೋರಾಟಗಾರರು ಹುತಾತ್ಮರಾಗಿದ್ದಾರೆ ನಾವುಗಳು ಈ ಹುತಾತ್ಮರನ್ನು ಮರೆಯಬಾರದು ಅವರನ್ನು ಸದಾ ಸ್ಮರಿಸಬೇಕು ಹಾಗೂ ಸಂಗೊಳ್ಳಿ ರಾಯಣ್ಣನವರ ದೇಶಭಕ್ತಿ, ಸ್ವಾಮಿಭಕ್ತಿ ಹೊರಾಟ ಮನೋಭಾವ ಇಂದಿನ ಪಿಳಿಗೆಗೆ ಭದ್ರ ಬುನಾದಿಯಾಗಿದೆ ಎಂದರು.
ಪ್ರಮುಖರಾದ ಭರಮಪ್ಪ ನಗರ, ವಿರುಪಣ್ಣ ಮೋರನಾಳ, ಭೀಮೇಶಪ್ಪ ಹವಳಣ್ಣವರ, ಶಿವಣ್ಣ ಮೋರನಾಳ, ಬಸವರಡ್ಡೆಪ್ಪ ಹಳ್ಳಿಕೇರಿ, ತೋಟಪ್ಪ ಶಿಂಟ್ರ, ಹೊನ್ನಪ್ಪಗೌಡ, ನಿಂಗಪ್ಪ ಬೂದಿಹಾಳ, ಚಂದ್ರಪ್ಪ ಹುಳ್ಳಿ, ಹನುಮಂತ ಸಾವುಕಾರ, ಯಲ್ಲಪ್ಪ ದಳಪತಿ, ಅಂದಪ್ಪ ಮಾಗಳದ, ಗಂಗಮ್ಮ ಶಿವಪ್ಪ ಸೊಂಪುರ, ಕರಿಯಪ್ಪ ವಡ್ಡಟ್ಟಿ, ಹನುಮಂತ, ಅಂದಪ್ಪ ಇತರರಿದ್ದರು.