ಮುಷ್ಟೂರು ಗ್ರಾಮದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪುತ್ಥಳಿ ಅನಾವರಣ

RAYANNA
ಸಿದ್ದಾಪುರ ಸಮೀದಪ ಮುಸ್ಟೂರಿನಲ್ಲಿ ಸ್ವಾತಂತ್ರ್ಯ ವೀರ ಸಂಗೊಳ್ಳಿ ರಾಯಣ್ಣ ಪುತ್ಥಳಿ ಅನಾವರಣ ಮಾಡಲಾಯಿತು.
Published on

ಸಿದ್ದಾಪುರ: ಸಮೀಪದ ಮಷ್ಟೂರು ಗ್ರಾಮದಲ್ಲಿ ಮಂಗಳವಾರ 77ನೇ ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಪುತ್ಥಳಿ ಅನಾವರಣ ಮಾಡಲಾಯಿತು.

ತುರ್ವಿಹಾಳ ಗುರುವಿನ ಮಠದ ಚಿದಾನಂದಯ್ಯ ತಾತ ರಾಯಣ್ಣನ ಮೂರ್ತಿಗೆ ಹಾರಹಾಕಿ ಮಾತನಾಡಿ, ಸಂಗೊಳ್ಳಿ ರಾಯಣ್ಣ ದೇಶ ಕಂಡ ಅಪ್ರತಿಮ ಸೇನಾನಿ. ಚರಿತ್ರೆಯಲ್ಲಿ ಸಂಗೊಳ್ಳಿ ರಾಯಣ್ಣನ ಹೆಸರು ಅಜರಾಮರ. ಅವರಿಂದು ನಮ್ಮೊಂದಿಗಿಲ್ಲದಿದ್ದರೂ ಅವರ ಆದರ್ಶಗಳು ಪ್ರೇರಕವಾಗಿವೆ ಎಂದರು.

ಬೆಳಗ್ಗೆ ಕುಂಭ-ಕಳಶ ಡೊಳ್ಳು ವಾದ್ಯಗಳೊಂದಿಗೆ ರಾಯಣ್ಣನ ಭಾವಚಿತ್ರದ ಮೆರವಣಿಗೆ ಮೂಲಕ ಗಂಗೆಸ್ಥಳಕ್ಕೆ ಹೋಗಿ ಪೂಜೆ ಸಲ್ಲಿಸಲಾಯಿತು. ಕುರುಬ ಸಮಾಜದ ಮುಖಂಡರು, ಗ್ರಾಮಸ್ಥರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net