ಸಂಗೊಳ್ಳಿ ರಾಯಣ್ಣ ಹುತಾತ್ಮ ದಿನ, ಗಣರಾಜ್ಯೋತ್ಸವ ಆಚರಣೆ

MDG RAYANNA HUTATMA DIN
Published on

ಮುಂಡರಗಿ: ಪಟ್ಟಣದ ಶ್ರೀ ಭಕ್ತ ಕನಕದಾಸ ವೃತ್ತದಲ್ಲಿ ತಾಲೂಕು ಕುರುಬ ಸಮಾಜದ ವತಿಯಿಂದ ಭಾನುವಾರ ಗಣರಾಜ್ಯೋತ್ಸವ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹುತಾತ್ಮ ದಿನ ಆಚರಿಸಲಾಯಿತು.

ನಂತರ ಪೊಲೀಸ್ ಠಾಣೆ ಮುಂದಿರುವ ಶ್ರೀ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರಸ್ತೆಯ ನಾಮಫಲಕದ ಬಳಿ ತಾಲೂಕು ಕುರುಬರ ಸಮಾಜದ ಹಾಗೂ ಸಂಗೊಳ್ಳಿ ರಾಯಣ್ಣ ಅಭಿಮಾನಿಗಳ ವತಿಯಿಂದ ಗಣರಾಜ್ಯೋತ್ಸವ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹುತಾತ್ಮ ದಿನ ಕಾರ್ಯಕ್ರಮ ಜರುಗಿತು. ಧ್ವಜಾರೋಹಣ ನೆರವೇರಿಸಲಾಯಿತು.

ಕುರುಬರ ಸಮಾಜದ ತಾಲೂಕಾಧ್ಯಕ್ಷ ಮಂಜುನಾಥ ಮುಂಡವಾಡ, ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಕುರಿ, ಯಲ್ಲಪ್ಪ ಕುಕನೂರು, ಮುತ್ತು ಬಳ್ಳಾರಿ, ರಮೇಶ ಹುಳಕ್ಕಣ್ಣವರ, ಶರಣಪ್ಪ ಮುದಿಯಜ್ಜನವರ, ಶರಣಪ್ಪ ಸಾಂಗ್ಲಿ, ಶೇಖಪ್ಪ ದಂಡಿನ, ದಶರಥ ಕುರಿ, ಚಂದ್ರಕಾಂತ ಚಿಕ್ಕಣ್ಣವರ, ನಿಜಲಿಂಗಪ್ಪ ಜಟ್ಲಣ್ಣವರ, ಮಂಜಪ್ಪ ಮೋರನಾಳ, ದೇವಪ್ಪ ಕುರಿ, ವಿಶ್ವನಾಥಗೌಡ ಪಾಟೀಲ, ಹನುಮಂತ ರಾಮನಹಳ್ಳಿ, ಉಮೇಶ ಬಳ್ಳಾರಿ, ಕೆಂಚನಗೌಡ ನಾಡಗೌಡ್ರ, ಅಶೋಕ ಕೋಳಿ, ಎ.ಪಿ. ದಂಡಿನ, ಮುತ್ತು ಹೆಗ್ಗಪ್ಪನವರ, ಶಿವಕುಮಾರ ಕುರಿ, ಪುಂಡಲೀಕ ಕಬ್ಬರ್ಗಿ, ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net