ಸಂಗೊಳ್ಳಿ ರಾಯಣ್ಣ ದೇಶ ಪ್ರೇಮ ಜಗತ್ತಿಗೆ ಮಾದರಿ

ಕೆ.ಆರ್.ನಗರ ತಾಲೂಕಿನ ಚೀರ್ನಹಳ್ಳಿ ಗ್ರಾಮದಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ನಿರ್ಮಾಣಕ್ಕೆ ಶಾಸಕ ಡಿ.ರವಿಶಂಕರ್ ಚಾಲನೆ ನೀಡಿದರು. ಜೆ.ಶಿವಣ್ಣ, ನೇತ್ರಾವತಿ, ರಾಘವೇಂದ್ರ, ಮಣಿಯಮ್ಮ, ಸುರೇಶ್, ಪ್ರಕಾಶ್, ಮಲ್ಲೇಶ್, ವೆಂಕಟರಾಮು, ರವಿ, ಕೃಷ್ಣ,  ಸಿ.ಪಿ.ಶಂಕರ್, ಸಿ.ಪಿ.ಬೀರೇಶ್, ಉಮೇಶ್, ಸಿ.ಟಿ.ಶಿವರಾಜು, ಸಿ.ಬಿ.ಶ್ರೀನಿವಾಸ್ ಇದ್ದರು.
ಕೆ.ಆರ್.ನಗರ ತಾಲೂಕಿನ ಚೀರ್ನಹಳ್ಳಿ ಗ್ರಾಮದಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ನಿರ್ಮಾಣಕ್ಕೆ ಶಾಸಕ ಡಿ.ರವಿಶಂಕರ್ ಚಾಲನೆ ನೀಡಿದರು. ಜೆ.ಶಿವಣ್ಣ, ನೇತ್ರಾವತಿ, ರಾಘವೇಂದ್ರ, ಮಣಿಯಮ್ಮ, ಸುರೇಶ್, ಪ್ರಕಾಶ್, ಮಲ್ಲೇಶ್, ವೆಂಕಟರಾಮು, ರವಿ, ಕೃಷ್ಣ, ಸಿ.ಪಿ.ಶಂಕರ್, ಸಿ.ಪಿ.ಬೀರೇಶ್, ಉಮೇಶ್, ಸಿ.ಟಿ.ಶಿವರಾಜು, ಸಿ.ಬಿ.ಶ್ರೀನಿವಾಸ್ ಇದ್ದರು.
Published on

ಕೆ.ಆರ್.ನಗರ: ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅವರ ದೇಶ ಪ್ರೇಮ, ಹೋರಾಟ ಮತ್ತು ದಿಟ್ಟತನ ಜಗತ್ತಿಗೆ ಮಾದರಿ ಎಂದು ಶಾಸಕ ಡಿ.ರವಿಶಂಕರ್ ಬಣ್ಣಿಸಿದರು.

ತಾಲೂಕಿನ ಚೀರ‌್ನಹಳ್ಳಿ ಗ್ರಾಮದಲ್ಲಿ ಭಾನುವಾರ ಸಂಗೊಳ್ಳಿ ರಾಯಣ್ಣ ಪ್ರತಿಮೆ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, 36 ವರ್ಷಗಳ ಕಾಲ ಬದುಕಿದ್ದ ಅವರ ಹೆಸರು ಮತ್ತು ಕೀರ್ತಿ ಸೂರ್ಯ ಮತ್ತು ಚಂದ್ರ ಇರುವವರೆಗೂ ಶಾಶ್ವತವಾಗಿ ಉಳಿಯಲಿದೆ ಎಂದರು.

ರಾಯಣ್ಣನವರ ನೂತನ ಪ್ರತಿಮೆಯನ್ನು ಸಂಕ್ರಾಂತಿ ನಂತರ ಅನಾವರಣ ಮಾಡುವುದಾಗಿ ಪ್ರಕಟಿಸಿದ ಶಾಸಕರು, ಇಂತಹ ಮಹಾನ್ ಕ್ರಾಂತಿವೀರನ ಪುತ್ಥಳಿಯನ್ನು ಗ್ರಾಮದಲ್ಲಿ ಸ್ಥಾಪಿಸಿದ ನಂತರ ಎಲ್ಲರೂ ಅವರನ್ನು ಗೌರವಿಸಿ ನಿತ್ಯ ಪೂಜಿಸಬೇಕು ಎಂದು ಸಲಹೆ ನೀಡಿದರು.

ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ರಾಜ್ಯ ಸರ್ಕಾರದಿಂದ 200 ಕೋಟಿ ರೂ.ಗೂ ಅಧಿಕ ಅನುದಾನ ಮಂಜೂರಾಗಿದ್ದು, ಪ್ರಮುಖ ಕಾಮಗಾರಿಗಳಿಗೆ ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗಳಿಂದ ಶೀಘ್ರ ಭೂಮಿಪೂಜೆ ಮಾಡಿಸುವುದಾಗಿ ತಿಳಿಸಿದರು.

ಕಂಚಿನ ಪುತ್ಥಳಿ ಮಾಡಿಸಿಕೊಡಲಿರುವ ನ್ಯೂ ಲೈಫ್ ಫೌಂಡೇಷನ್ ಅಧ್ಯಕ್ಷ ಮತ್ತು ಪ್ರಸಿದ್ಧ ಎಚ್.ಆರ್. ಸಲ್ಯೂಷನ್ ವ್ಯವಸ್ಥಾಪಕ ನಿರ್ದೇಶಕ ಶಿವಮಾಧು ಅವರನ್ನು ಶಾಸಕರು ಅಭಿನಂದಿಸಿದರು. ತಾಲೂಕು ಕುರುಬರ ಸಂಘದ ಅಧ್ಯಕ್ಷ ಜೆ.ಶಿವಣ್ಣ, ಚಂದಗಾಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ನೇತ್ರಾವತಿ ಕುಂಟೇಗೌಡ, ಉಪಾಧ್ಯಕ್ಷ ರಾಘವೇಂದ್ರ, ಸದಸ್ಯರಾದ ಮಣಿಯಮ್ಮ, ಸುರೇಶ್, ಪ್ರಕಾಶ್, ಮಲ್ಲೇಶ್, ವೆಂಕಟರಾಮು, ಮಾಜಿ ಸದಸ್ಯರಾದ ರವಿ, ಕೃಷ್ಣ, ಗ್ರಾಮದ ಮುಖಂಡರಾದ ಸಿ.ಪಿ.ಶಂಕರ್, ಸಿ.ಪಿ.ಬೀರೇಶ್, ಉಮೇಶ್, ಸಿ.ಟಿ.ಶಿವರಾಜು, ಸಿ.ಬಿ.ಶ್ರೀನಿವಾಸ್, ಕೃಷ್ಣೇಗೌಡ, ರಾಜೇಗೌಡ, ಸಿ.ಪಿ.ಆನಂದ್, ಸಿ.ಇ.ಉಮೇಶ್, ಸತೀಶ್, ಕರೀಗೌಡ, ಮಹದೇವ್‌ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net