ಸಂಗೊಳ್ಳಿ ರಾಯಣ್ಣನ ದೇಶಪ್ರೇಮ ಅಮರ

web1
ಕಲ್ಲೊಳ್ಳಿಯಲ್ಲಿ ನಿರ್ಮಾಣಗೊಂಡ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಪುತ್ಥಳಿಯನ್ನು ಶಾಸಕ ಬಾಲಚಂದ್ರ ಜಾರಕಿಹೊಳಿ ಅನಾವರಣಗೊಳಿಸಿದರು. ಬಸಗೌಡ ಪಾಟೀಲ, ರಾಜೇಂದ್ರ ಸಣ್ಣಕ್ಕಿ ಇತರರು ಇದ್ದರು.
Published on

ಮೂಡಲಗಿ: ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ದೇಶಪ್ರೇಮ ಇಂದಿಗೂ, ಎಂದೆಂದಿಗೂ ಅಮರ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.

ತಾಲೂಕಿನ ಕಲ್ಲೊಳ್ಳಿ ಪಪಂ ಕಚೇರಿ ಬಳಿ ನಿರ್ಮಾಣಗೊಂಡ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಪ್ರತಿಮೆಯನ್ನು ಗುರುವಾರ ಅನಾವರಣಗೊಳಿಸಿ ಮಾತನಾಡಿದ ಅವರು, ರಾಯಣ್ಣನಂತಹ ಕೆಚ್ಚೆದೆಯ ಶೂರರ ಜೀವನವು ಪ್ರತಿಯೊಬ್ಬ ವ್ಯಕ್ತಿಗೂ ಮಾದರಿಯಾಗಿದೆ.

ಕಿತ್ತೂರು ಸಂಸ್ಥಾನ ಮತ್ತು ನಮ್ಮ ದೇಶದ ಸ್ವಾತಂತ್ರ್ಯ ಸಂಗ್ರಾಮಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಟ ಮಾಡಿದರು. ಕಿತ್ತೂರು ಚನ್ನಮ್ಮನ ಬಲಗೈ ಬಂಟನಾಗಿ ಸಂಸ್ಥಾನ ಉಳಿಸಿಕೊಳ್ಳಲು ವೀರಯೋಧನಂತೆ ಕ್ರಾಂತಿ ಮಾಡಿದ ರಾಯಣ್ಣನು ಮಾನವಕುಲದ ಆಸ್ತಿ ಎಂದರು.

ಶಾಸಕ ಬಾಲಚಂದ್ರ ಅವರನ್ನು ಕಂಬಳಿ ಹೊದಿಸಿ ಸತ್ಕರಿಸಲಾಯಿತು. ಕವಲಗುಡ್ಡದ ಅಮರೇಶ್ವರ ಮಹಾರಾಜರು ಸಾನ್ನಿಧ್ಯ ವಹಿಸಿದ್ದರು. ಜಿಪಂ ಮಾಜಿ ಅಧ್ಯಕ್ಷ ಬಸಗೌಡ ಪಾಟೀಲ, ರಾಜ್ಯ ಕುರುಬರ ಸಂಘದ ನಿರ್ದೇಶಕ ರಾಜೇಂದ್ರ ಸಣ್ಣಕ್ಕಿ, ಮುಖಂಡರಾದ ನೀಲಕಂಠ ಕಪ್ಪಲಗುದ್ದಿ, ಸುಭಾಸ ಕುರಬೇಟ, ಮಲ್ಲಪ್ಪ ಹೆಬ್ಬಾಳ, ಮಲ್ಲು ಕಡಾಡಿ, ಬಸವರಾಜ ಯಾದಗೂಡ, ಉಮೇಶ ಬೂದಿಹಾಳ, ಮಹಾಂತೇಶ ಕಪ್ಪಲಗುದ್ದಿ, ವಸಂತ ತಹಸೀಲ್ದಾರ್, ಮಾಳಪ್ಪ ಸನದಿ, ರಾಮು ಗಾಣಿಗೇರ, ಮಹಾದೇವ ಮದಬಾವಿ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net