ಸಂಗೊಳ್ಳಿ ರಾಯಣ್ಣ ಪ್ರಶಸ್ತಿ ಪ್ರದಾನ 15ಕ್ಕೆ

NEW SANGOLLI RAYANNA PM NEW
Published on

ಹುಬ್ಬಳ್ಳಿ : ಪ್ರಸಕ್ತ ಸಾಲಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಆ. 15ರಂದು ಸಂಜೆ 4 ಗಂಟೆಗೆ ಇಲ್ಲಿನ ಚನ್ನಮ್ಮ ವೃತ್ತದಲ್ಲಿ ಆಯೋಜಿಸಲಾಗಿದೆ.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಆಯ್ಕೆ ಸಮಿತಿ ಉಪಾಧ್ಯಕ್ಷ ಸುನೀಲ ರೇವಣಕರ, ವಿವಿಧ ಕ್ಷೇತ್ರಗಳ ಸಾಧಕರನ್ನು ಆಯ್ಕೆ ಮಾಡಿ ಪ್ರಶಸ್ತಿ ನೀಡಲಾಗುತ್ತದೆ ಎಂದರು.

ಪತ್ರಿಕಾ ರಂಗದಲ್ಲಿ ವಿಜಯವಾಣಿಯ ಹಿರಿಯ ಉಪ ಸಂಪಾದಕ ದೀಪಕ ತಲವಾಯಿ, ಪುಟವಿನ್ಯಾಸಕಾರ ಮಲ್ಲಿಕಾರ್ಜುನ ಪಿಳ್ಳೆ ಸೇರಿ ವಿವಿಧ ಪತ್ರಿಕೆಗಳ 11 ಸಾಧಕರಿಗೆ, ವೈದ್ಯಕೀಯ ಕ್ಷೇತ್ರದ 8 ಸಾಧಕರಿಗೆ, ಸಹಕಾರ ಕ್ಷೇತ್ರದ ಮೂವರು ಸಾಧಕರಿಗೆ, ಅಂಚೆ ಇಲಾಖೆಯ ಇಬ್ಬರಿಗೆ, ಕ್ರೀಡಾ ವಿಭಾಗದ ನಾಲ್ವರಿಗೆ, ಇಬ್ಬರು ಕಲಾವಿದರಿಗೆ, ಸಾರಿಗೆ ಇಲಾಖೆಯ 10 ಜನರಿಗೆ, ಪೊಲೀಸ್ ಇಲಾಖೆಯ 12 ಜನರಿಗೆ, 22 ಜನ ಸಮಾಜ ಸೇವಕರಿಗೆ ಈ ಬಾರಿಯ ಸಂಗೊಳ್ಳಿ ರಾಯಣ್ಣ ಪ್ರಶಸ್ತಿ ನೀಡಲಾಗುವುದು ಎಂದು ವಿವರಿಸಿದರು.

ಸಂಗೊಳ್ಳಿ ರಾಯಣ್ಣ ಹಿತರಕ್ಷಣಾ ಸಮಿತಿಯ ಧಾರವಾಡ ಜಿಲ್ಲಾ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ತಾಲೂರ, ಲೀಲಾ ಸಿಂದಗಿ, ಸರೋಜಾ ಛಬ್ಬಿ, ಬಾಳಮ್ಮ ಜಂಗಿನವರ ಸುದ್ದಿಗೋಷ್ಠಿಯಲ್ಲಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net