ಸಂಘನಿಕೇತನ ಗಣೇಶೋತ್ಸವ ಸಂಪನ್ನ

MNG-August 4-Sanghanikethana 1
Published on

ಮಂಗಳೂರು: ಕೇಶವ ಸ್ಮತಿ ಸಂವರ್ಧನ ಸಮಿತಿ ಆಶ್ರಯದಲ್ಲಿ ನಗರದ ಮಣ್ಣಗುಡ್ಡೆ ಸಂಘನಿಕೇತನದಲ್ಲಿ ಐದು ದಿನಗಳ ಪರ್ಯಂತ ಜರುಗಿದ 75ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ ಭಾನುವಾರ ಸಂಪನ್ನಗೊಂಡಿತು. ಶ್ರದ್ಧಾಭಕ್ತಿಯಿಂದ ಪೂಜಿಸ್ಪಟ್ಟ ಗಣಪತಿ ಮೂರ್ತಿಯನ್ನು ರಥಬೀದಿಯ ಮಹಮ್ಮಾಯಿ ತೀರ್ಥದಲ್ಲಿ ವಿಸರ್ಜಿಸಲಾಯಿತು.
ಬುಧವಾರ ಮೂರ್ತಿ ಪ್ರತಿಷ್ಠಾಪನೆಯೊಂದಿಗೆ ಆರಂಭವಾದ ಉತ್ಸವ, ಭಾನುವಾರ ವಿಸರ್ಜನೆಯೊಂದಿಗೆ ಅಂತ್ಯಗೊಂಡಿತು. ಗಣಪತಿ ಮೂರ್ತಿಯನ್ನು ಟ್ಯಾಟ್ಲೋದಲ್ಲಿರಿಸಿ, ಸಂಭ್ರಮದ ವಿಸರ್ಜನಾ ಮೆರವಣಿಗೆ ನೆರವೇರಿಸಲಾಯಿತು. ಗಣೇಶೋತ್ಸವ ಸಮಿತಿ ಅಧ್ಯಕ್ಷ ಪ್ರವೀಣ್ ಕುಮಾರ್, ಪ್ರಧಾನ ಕಾರ್ಯದರ್ಶಿ ಎಂ.ಸತೀಶ್ ಪ್ರಭು, ಸುರೇಶ್ ಕಾಮತ್, ಉಪಾಧ್ಯಕ್ಷ ರಾದ ಜಿ.ಕೆ.ರಾವ್, ಆನಂದ ಪಾಂಗಾಳ, ಕೆ.ಪಿ ಟೈಲರ್, ಅಭಿಷೇಕ್ ಭಂಡಾರಿ, ಜೀವನರಾಜ್ ಶೆಣೈ, ಪ್ರಮುಖರಾದ ರಘುವೀರ್ ಕಾಮತ್, ಎಸ್.ಆರ್.ಕುಡ್ವ, ಗಣೇಶ್ ಪ್ರಸಾದ್, ಜಯಪ್ರಕಾಶ್ ಮಂಗಳಾದೇವಿ, ಸ್ವಾಮಿ ಪ್ರಸಾದ್ ಮೊದಲಾದವರು ಉಪಸ್ಥಿತರಿದ್ದರು. ನೂರಾರು ಸಂಖ್ಯೆಯಲ್ಲಿ ಭಕ್ತರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net