

ಮಂಡ್ಯ: ಗ್ರಾಹಕರ ಜತೆ ಬ್ಯಾಂಕಿನ ಬಾಂಧವ್ಯ ಉತ್ತಮವಾಗಿರಬೇಕು. ಆಗ ಮಾತ್ರ ಠೇವಣಿದಾರರು ವ್ಯವಹಾರ ಮಾಡಲು ಇಷ್ಟಪಡುತ್ತಾರೆ ಎಂದು ಎಂಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ಸಿ.ಪಿ.ಉಮೇಶ್ ಸಲಹೆ ನೀಡಿದರು.
ನಗರದ ಹರ್ಡೀಕರ್ ಭವನದಲ್ಲಿ ಆಯೋಜಿಸಿದ್ದ ಸಂಘಮಿತ್ರ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯ 2023-24 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಸಹಕಾರ ಸಂಘಗಳು ಗುಣಮಟ್ಟದ ಸೇವೆಯನ್ನು ಒದಗಿಸಿಕೊಡಬೇಕು ಎಂದು ತಿಳಿಸಿದರು.
ಸಹಕಾರ ಸಂಘಗಳು 1950ರ ನಂತರ ಜಿಲ್ಲೆಯಲ್ಲಿ ಸಹಕಾರ ತತ್ವದ ಆಧಾರದ ಮೇಲೆ ಪ್ರಾರಂಭವಾದವು. ಬಳಿಕ ಸಹಕಾರ ಸಂಘಗಳು ಗುಣಮಟ್ಟದಲ್ಲಿ ಕಾರ್ಯನಿರ್ವಹಣೆ ಮಾಡುತ್ತಿದ್ದವು. ಕ್ರಮೇಣ ಜಿಲ್ಲೆಯಲ್ಲಿ ಕಡಿಮೆಯಾಗುತ್ತಾ ಬರುತ್ತಿವೆ. ಆದರೆ ಉತ್ತರ ಕರ್ನಾಟಕದಲ್ಲಿ ಸಹಕಾರ ಸಂಘಗಳು ಗುಣಮಟ್ಟದಿಂದ ಹೆಚ್ಚು ಕಾರ್ಯನಿರ್ವಹಣೆ ಮಾಡುತ್ತಿವೆ. ಬ್ಯಾಂಕಿನ ನಿರ್ವಹಣೆ ಮಾಡಲು ಆಡಳಿತ ಮಂಡಳಿಯ ಎಲ್ಲಾ ಸದಸ್ಯರು ಕೂಡ ಒಗ್ಗೂಡಿ ಕೆಲಸ ಮಾಡಬೇಕು ಎಂದು ಕಿವಿಮಾತು ಹೇಳಿದರು.
ರಿಸರ್ವ್ ಬ್ಯಾಂಕಿನ ಸುತ್ತೋಲೆಗಳ ಪ್ರಕಾರ ಬ್ಯಾಂಕ್ ಕಾರ್ಯನಿರ್ವಹಣೆ ಮಾಡಬೇಕು. ಗ್ರಾಹಕರ ವಿಶ್ವಾಸ ಗಳಿಸುವ ಕೆಲಸವನ್ನು ಬ್ಯಾಂಕಿನ ಆಡಳಿತ ಮಂಡಳಿ ಮಾಡಬೇಕು. ಸದಸ್ಯರು, ಠೇವಣಿದಾರರು, ಗ್ರಾಹಕರು ಸಾಲ ಪಡೆಯುವುದರಿಂದ ವ್ಯವಹಾರ ನಡೆಯುತ್ತದೆ. ಅದೇ ರೀತಿ ಬ್ಯಾಂಕ್‌ನಲ್ಲಿ ಗುಣಮಟ್ಟ ಹೆಚ್ಚಾದಾಗ ಠೇವಣಿದಾರರು ಹಣ ಹೂಡಿಕೆ ಮಾಡಲು ಆಸಕ್ತಿ ತೋರಿಸುತ್ತಾರೆ ಎಂದರು.
ಮೈಸೂರಿನ ವಿಶ್ವ ಮೈತ್ರಿ ಪುಟ್ಟ ವಿಹಾರದ ಡಾ.ಕಲ್ಯಾಣ ಸಿರಿ ಬಂತೇಜಿ ಸಮಾರಂಭದ ಸಾನಿಧ್ಯ ವಹಿಸಿದ್ದರು. ಸಂಘಮಿತ್ರ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಅಧ್ಯಕ್ಷ ಡಾ.ವೈ.ಎಸ್.ಸಿದ್ದರಾಜು ಅಧ್ಯಕ್ಷತೆ ವಹಿಸಿದ್ದರು. ರೇಷ್ಮೆ ಇಲಾಖೆ ನಿವೃತ್ತ ಉಪ ನಿರ್ದೇಶಕ ಬಿ.ಎಸ್.ಸ್ವಾಮಿ ವಿವೇಕಾನಂದ, ನಿವೃತ್ತ ಪಿಎಸ್‌ಐ ಎಸ್.ಮಹದೇವಯ್ಯ, ಸಂಘ ಮಿತ್ರ ಸೊಸೈಟಿ ಉಪಾಧ್ಯಕ್ಷ ಸಿ.ಶಿವಲಿಂಗಯ್ಯ,ನಿರ್ದೇಶಕರಾದ ಮಹದೇವಪ್ಪ, ಡಿ.ಪ್ರೇಮ್‌ಕುಮಾರ್, ಎಸ್.ಮಂಜುನಾಥ್, ಪ್ರಮೀಳಾ ಕುಮಾರಿ, ಜಯರಾಮು, ಮಹಾದೇವಸ್ವಾಮಿ, ಬೋರಯ್ಯ, ಮುತ್ತಯ್ಯ, ಸತೀಶ್, ಮುನಿವೆಂಕಟಮ್ಮ, ಸಿಇಒ ಎಸ್.ಪವಿತ್ರಾ, ಸಹಾಯಕಿ ಎಂ.ಕೆ.ಪುಷ್ಪಲತಾ ಇತರರಿದ್ದರು.