

ಮಂಗಳೂರು: ಹಿಂದೂಸ್ತಾನೀ ಶಾಸೀಯ ಸಂಗೀತವನ್ನು ಯುವ ಜನತೆಯಲ್ಲಿ ಜನಪ್ರಿಯಗೊಳಿಸುವ ಉದ್ದೇಶದಿಂದ ಮಂಗಳೂರಿನ ಸಂಗೀತ ಭಾರತಿ ೌಂಡೇಶನ್ ಸಂಸ್ಥೆಯು ೆ. 8 ಮತ್ತು 9ರಂದು ಮಂಗಳೂರಿನ ಡಾನ್‌ಭಾಸ್ಕೋ ಸಭಾಂಗಣದಲ್ಲಿ ರಾಷ್ಟ್ರ ಮಟ್ಟದ ಸಂಗೀತ ಸ್ಪರ್ಧೆ ಹಾಗೂ ವಿಜೇತರಿಗೆ ಪುರಸ್ಕಾರ ‘ಡಾ.ಪಿ ದಯಾನಂದ ಪೈ ಯುವ ಮಹೋತ್ಸವ್ 2025’ ಆಯೋಜಿಸಿದೆ.
ಇದು ರಾಷ್ಟ್ರಮಟ್ಟದ ಸ್ಪರ್ಧೆಯಾಗಿದ್ದು, ಕೊನೆಯ ಸುತ್ತಿನಲ್ಲಿ 18ರಿಂದ 30 ವರ್ಷದೊಳಗಿನ 24 ಯುವ ಸಂಗೀತಗಾರರು ಭಾಗವಹಿಸುತ್ತಿದ್ದಾರೆ. ನೋಂದಾಯಿತ ರ್ಸ್ಪಗಳನ್ನು ಆನ್‌ಲೈನ್‌ನಲ್ಲಿ ಆಯ್ಕೆ ಮಾಡಿ ಕೊನೆಯ ಸುತ್ತಿನ ಸ್ಪರ್ಧೆಗೆ 24 ಮಂದಿ ಕಲಾವಿದರನ್ನು ಆಯ್ಕೆ ಮಾಡಲಾಗಿದೆ ಎಂದು ಸಂಗೀತ ಭಾರತಿ ಪ್ರತಿಷ್ಠಾನದ ಉಪಾಧ್ಯಕ್ಷ ಪ್ರೊ.ನರೇಂದ್ರ ಎಲ್.ನಾಯಕ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ವಾದ್ಯ ವಾದನ (ತಬ್ಲಾ ಮತ್ತು ಪಕವಾಜ್ ಹೊರತುಪಡಿಸಿ) ಹಾಗೂ ಹಾಡುಗಾರಿಕೆ ವಿಭಾಗದಲ್ಲಿ ಪ್ರತ್ಯೇಕ ಸ್ಪರ್ಧೆ ಇದ್ದು, ಪ್ರಥಮ 60 ಸಾವಿರ ರೂ., ದ್ವಿತೀಯ 40 ಸಾವಿರ ರೂ. ಹಾಗೂ ತತೀಯ ಸ್ಥಾನಿಗೆ 20 ಸಾವಿರ ರೂ. ನಗದು ಬಹುಮಾನ ನೀಡಲಾಗುವುದು. ಇದಲ್ಲದೆ ಪ್ರಥಮ ಸ್ಥಾನ ವಿಜೇತರಿಗೆ ‘ಸ್ವರ ಭಾರತಿ’ ಬಿರುದು ಪ್ರದಾನ ಮಾಡಲಾಗುವುದು ಎಂದು ಅವರು ತಿಳಿಸಿದರು.
ಅಂತಾರಾಷ್ಟ್ರೀಯ ಮಟ್ಟದ ಕಲಾವಿದರಾದ ಪಂ. ರೋನು ಮುಜುಂದಾರ್, ಉಸ್ತಾದ್ ರಫೀಕ್ ಖಾನ್, ಪಂ.ಜಯತೀರ್ಥ ಮೇವುಂಡಿ, ಪ್ರಖ್ಯಾತ ಯುವ ತಬ್ಲಾ ವಾದಕ ಪಂ. ಯಶವಂತ್ ವೈಷ್ಣವ್, ವಿದೂಷಿ ಪೂರ್ಣಿಮಾ ಭಟ್ ಕುಲಕರ್ಣಿ, ಡಾ. ಶಶಾಂಕ್ ಮಕ್ತೇದಾರ್ ಹಾಗೂ ಪ್ರಖ್ಯಾತ ಯುವ ತಬ್ಲಾ ಪಟು ಯಶವಂತ್ ವೈಷ್ಣವ್ ಅವರ ತಂಡವು ಸ್ಪರ್ಧೆಯ ತೀರ್ಪುಗಾರರಾಗಿ ಸಹಕರಿಸಲಿದ್ದಾರೆ. ಎರಡೂ ವಿಭಾಗಗಳ ಅಂತಿಮ ಸುತ್ತಿನ ಸ್ಪರ್ಧೆ ೆ. 8 ರಂದು ಬೆಳಗ್ಗೆ 8.30 ರಿಂದ ನಡೆಯಲಿದೆ ಎಂದು ಸಂಗೀತ ಭಾರತಿ ಪ್ರತಿಷ್ಠಾನದ ಕಾರ್ಯದರ್ಶಿ ಡಾ.ಉಷಾಪ್ರಭಾ ಎನ್. ನಾಯಕ್ ಹೇಳಿದರು.
ೆ. 9ರಂದು ಈ ಯುವ ಮಹೋತ್ಸವ 2025 ಭಾಗವಾಗಿ ನಡೆಯುವ ಮಾಸ್ಟರ್ ತರಗತಿಗಳ ಮೂಲಕ ಭಾರತದ ಪ್ರಮುಖ ಸಂಗೀತಗಾರರಿಂದ ಸಂಗೀತ ಕಲಿಯಲು ಯುವ ಜನರಿಗೆ ಸಂಗೀತ ಭಾರತಿ ೌಂಡೇಶನ್ ಅವಕಾಶ ನೀಡುತ್ತಿದೆ. ಸಂಗೀತ ಕಲಿಯುವ ವಿದ್ಯಾರ್ಥಿಗಳಿಗೆ ಇದೊಂದು ಅನನ್ಯ ಅವಕಾಶವಾಗಿದೆ. ಉಸ್ತಾದ್ ರಫೀಕ್ ಖಾನ್, ಡಾ.ಶಶಾಂಕ್ ಮಕ್ತೇದಾರ್ ಹಾಗೂ ಬೆಂಗಳೂರಿನ ವಿದುಷಿ ಪೂರ್ಣಿಮಾ ಭಟ್ ಕುಲಕರ್ಣಿ ಅವರು ವಿಶೇಷ ತರಗತಿಗಳನ್ನು ನಡೆಸಿಕೊಡಲಿದ್ದಾರೆ ಎಂದರು.
ೆ.9ರಂದು ಸಂಜೆ 4ರಿಂದ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಯುವ ಮಹೋತ್ಸವ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣೆ ನಡೆಯುವುದು. ಪ್ರಥಮ ಸ್ಥಾನಿಗಳಿಗೆ ಬಿರುದು ಪ್ರದಾನ ಸಮಾರಂಭ ನಡೆಯಲಿದೆ. ಸಭಾ ಕಾರ್ಯಕ್ರಮದ ಬಳಿಕ ಮುಂಬಯಿಯ ಪಂ. ರೋನು ಮುಜುಂದಾರ್, ಹುಬ್ಬಳ್ಳಿಯ ಪಂ.ಜಯತೀರ್ಥ ಮೇವುಂಡಿ ಮತ್ತು ಉಸ್ತಾದ್ ರಫೀಕ್ ಖಾನ್ ಇವರ ಬಾನ್ಸುರಿ- ಗಾಯನ- ಸಿತಾರ್ ಜುಗಲ್ ಬಂಧಿ ಕಾರ್ಯಕ್ರಮ ನಡೆಯಲಿದೆ. ಇದೊಂದು ಅಭೂತಪೂರ್ವ ಕಾರ್ಯಕ್ರಮವಾಗಿದ್ದು, ಮುಂಬಯಿಯ ಪಂ. ಯಶವಂತ್ ವೈಷ್ಣವ್ ತಬ್ಲಾದಲ್ಲಿ ಹಾಗೂ ಪ್ರೊ.ನರೇಂದ್ರ ಎಲ್. ನಾಯಕ್ ಹಾರ್ಮೊನಿಯಂನಲ್ಲಿ ಸಹಕಾರ ನೀಡಲಿದ್ದಾರೆ ಎಂದರು.
ಸಂಗೀತಗೊಷ್ಠಿಯಲ್ಲಿ ಖಜಾಂಚಿ ಕರುಣಾಕರ ಬಳ್ಕೂರು, ಟ್ರಸ್ಟಿಗಳಾದ ಮುರುಳೀಧರ್ ಜಿ ಶೆಣೈ, ಡಾ.ರಮೇಶ್ ಕೆ ಜಿ ಉಪಸ್ಥಿತರಿದ್ಧರು.
****
ಗಾಯನ ತರಗತಿಗೆ ನೋಂದಾಯಿಸಿ:
ಗಾಯನ ತರಗತಿಯನ್ನು ನಡೆಸಿಕೊಡಲಿರುವ ಗೋವಾದ ಡಾ. ಶಶಾಂಕ್ ಮಕ್ತೇದಾರ್ ಅವರು ಪಂಡಿತ್ ಉಲ್ಲಾಸ್ ಕಶಾಲ್‌ಕರ್ ಅವರ ಶಿಷ್ಯರಾಗಿದ್ದಾರೆ. ಶುದ್ಧ ಶಾಸೀಯ ಸಂಗೀತ, ಹೊಸ ಹೊಸ ಕೌಶಲಗಳ ಅಳವಡಿಕೆ, ಹಾಡನ್ನು ಪ್ರಸ್ತುತ ಪಡಿಸುವ ಗಾಯನ ಶೈಲಿಯಿಂದ ಖ್ಯಾತಿ ಪಡೆದಿದ್ದಾರೆ. ಬೆಂಗಳೂರಿನ ಪೂರ್ಣಿಮಾ ಭಟ್ ಕುಲಕರ್ಣಿ ಅವರು ಖ್ಯಾತ ಗಾಯಕಿ, ಪಂಡಿತ್ ಬಸವರಾಜ ರಾಜಗುರು ಅವರ ಶಿಷ್ಯೆ. ಶಾಸೀಯ ಸಂಗೀತ, ಭಕ್ತಿ ಗೀತೆ ಸೇರಿದಂತೆ ಹಲವು ಗೀತೆ ಪ್ರಕಾರಗಳನ್ನು ಅನೇಕ ಬಾರಿ ಪ್ರಸ್ತುತ ಪಡಿಸಿರುತ್ತಾರೆ. ವಾದ್ಯ ಸಂಗೀತ ತರಗತಿ ನಡೆಸಿಕೊಡಲಿರುವ ಉಸ್ತಾದ್ ರಫೀಕ್ ಖಾನ್ ಅವರು ಧಾರವಾಡ ಘರಾನಾದ ಆರನೇ ತಲೆಮಾರಿನ ಸಿತಾರ್ ವಾದಕ, ಅವರ ಶುದ್ಧ ಮಾಧುರ್ಯ, ಅನುಕರಣೀಯ ತಂತ್ರಗಾರಿಕೆಯಿಂದ ಹೆಸರುವಾಸಿಯಾಗಿದ್ದಾರೆ. ಈ ಸಂಗೀತ ವಿಶೇಷ ತರಗತಿಗಳಲ್ಲಿ ಭಾಗವಹಿಸಲು ಇಚ್ಛಿಸುವ ಸಂಗೀತಾಸಕ್ತರು ಮತ್ತು ಸಂಗೀತ ವಿದ್ಯಾರ್ಥಿಗಳು masterclass.sangeetbharati.org ನಲ್ಲಿ ಹೆಸರು ನೋಂದಾಯಿಸಿಕೊಳ್ಳಬೇಕು ಸಂಗೀತ ಭಾರತಿ ಪ್ರತಿಷ್ಠಾನದ ಕಾರ್ಯದರ್ಶಿ ಡಾ. ಉಷಾಪ್ರಭಾ ಎನ್. ನಾಯಕ್ ಹೇಳಿದರು.