

ಮಂಗಳೂರು : ಸಂಗೀತ ಪರಿಷತ್ ಮಂಗಳೂರು, ಭಾರತೀಯ ವಿದ್ಯಾಭವನ ಮತ್ತು ರಾಮಕೃಷ್ಣ ಮಠ ಮಂಗಳೂರು ವತಿಯಿಂದ ನ.29ರಿಂದ ಡಿ.1ರವರೆಗೆ ‘ಮಂಗಳೂರು ಸಂಗೀತೋತ್ಸವ-2024’ ಕಾರ್ಯಕ್ರಮ ನಗರದ ಮಂಗಳಾದೇವಿಯ ರಾಮಕೃಷ್ಣ ಮಠದ ಸ್ವಾಮಿ ವಿವೇಕಾನಂದ ಸಭಾಂಗಣದಲ್ಲಿ ಕರ್ನಾಟಕ ಶಾಸೀಯ ನಡೆಯಲಿದೆ.
ನ.29ರಂದು ಸಾಯಂಕಾಲ 5ಕ್ಕೆ ರಾಮಕೃಷ್ಣ ಮಠದ ಅಧ್ಯಕ್ಷ ಸ್ವಾಮಿ ಜಿತಕಾಮಾನಂದಜೀ ಅವರ ಉಪಸ್ಥಿತಿಯಲ್ಲಿ ಶರವು ಮಹಾಗಣಪತಿ ದೇವಸ್ಥಾನದ ಮೊಕ್ತೇಸರ ಶರವು ರಾಘವೇಂದ್ರ ಶಾಸಿ ಅವರು ಸಂಗೀತೋತ್ಸವ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್.ಜಿ., ಮೆಸ್ಕಾಂ ಕಾರ್ಯನಿರ್ವಾಹಕ ನಿರ್ದೇಶಕಿ ಡಿ. ಪದ್ಮಾವತಿ ಭಾಗವಹಿಸಲಿದ್ದಾರೆ .ಸಾಯಂಕಾಲ 5.15ರಿಂದ ಚೆರ್ತಲ ರಂಗನಾಥ ಶರ್ಮ ಅವರು ಹಾಡುಗಾರಿಕೆ
ನಡೆಯಲಿದೆ.ಎಂದು ಸಂಗೀತ ಪರಿಷತ್‌ನ ಅಧ್ಯಕ್ಷ ಎಂ.ವಿ. ಪ್ರದೀಪ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನ.30ರಂದು ಸಾಯಂಕಾಲ 5ರಿಂದ ಡಾ. ಎನ್.ಜೆ. ನಂದಿನಿ ಅವರ ಹಾಡುಗಾರಿಕೆ ನಡೆಯಲಿದೆ. ಡಿ.1ರಂದು ಬೆಳಗ್ಗೆ 10ಕ್ಕೆ ಚೆನ್ನೈಯ ಕುನ್ನಕ್ಕುಡಿ ಬಾಲಮುರಳಿಕೃಷ್ಣ ಅವರ ಹಾಡುಗಾರಿಕೆ ಹಾಗೂ ಮಧ್ಯಾಹ್ನ 2ಕ್ಕೆ ಸಂಗೀತ ಪರಿಷತ್ ನಡೆಸಿದ ಸೀನಿಯರ್ ಶಾಸೀಯ ಸಂಗೀತ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಪ್ರಾರ್ಥನಾ ಬಂಗಾರಡ್ಕ ಅವರ ಹಾಡುಗಾರಿಕೆ ನಡೆಯಲಿದೆ. ಸಾಯಂಕಾಲ 5.15ಕ್ಕೆ ಚೆನ್ನೈಯ ಕೊಳಲುವಾದಕ ಜೆ.ಎ. ಜಯಂತ್ ಅವರು ವೇಣುವಾದನ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ ಎಂದು ಅವರು ತಿಳಿಸಿದರು .
ಸಾಯಂಕಾಲ 4ಕ್ಕೆ ಗಣ್ಯರ ಉಪಸ್ಥಿತಿಯಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ. ಮೃದಂಗ ವಿದ್ವಾಂಸ ಸೂರಳಿ ಆರ್.ಗಣೇಶ್ ಮೂರ್ತಿ ಅವರಿಗೆ ಸಂಗೀತೋತ್ಸವ-2024 ಪ್ರಶಸ್ತಿ ನೀಡಲಾಗುವುದು. ಮಂಗಳೂರಿನ ಸುಮುಖ ಕಾರಂತ ಮತ್ತು ಗೌತಮ್
ಭಟ್.ಪಿ.ಜಿ. ಇವರಿಗೆ ಯುವ ಪ್ರತಿಭಾ ಪ್ರಶಸ್ತಿ ನೀಡಲಾಗುವುದು ಎಂದು ಅವರು ತಿಳಿಸಿದರು.
ಸಂಗೀತ ಪರಿಷತ್‌ನ ಕಾರ್ಯದರ್ಶಿ ಎ. ಮೋಹನ್‌ದಾಸ್, ಕೋಶಾಧಿಕಾರಿ ಸುಬ್ರಹ್ಮಣ್ಯ ಉಡುಪ, ಸದಸ್ಯರಾದ ಎ. ರಂಗನಾಥ್, ಹರೀಶ್ ಕೋಟೆಕಾರ್, ಪ್ರಕಾಶ್ ರಾವ್ ಕೋಟೆಕಾರ್ ಉಪಸ್ಥಿತರಿದ್ದರು.