

ಹುಬ್ಬಳ್ಳಿ : ತ್ರಯಿ ಕಲಾ ಸಂಸ್ಥೆಯ 2ನೇ ವಾರ್ಷಿಕೋತ್ಸವದ ಅಂಗವಾಗಿ ಹುಬ್ಬಳ್ಳಿಯಲ್ಲಿ ಆ. 6 ರಂದು ‘ಸಂಗೀತ ಶ್ರಾವಣ’ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಇಲ್ಲಿನ ದೇಶಪಾಂಡೆನಗರದ ಸವಾಯಿ ಗಂಧರ್ವ ಕಲಾ ಮಂದಿರದಲ್ಲಿ ಅಂದು ಬೆಳಗ್ಗೆ 9 ರಿಂದ ರಾತ್ರಿ 9 ಗಂಟೆಯವರೆಗೆ ದಿನಪೂರ್ತಿ ನಡೆಯಲಿರುವ ಕಾರ್ಯಕ್ರಮದಲ್ಲಿ ನಾಡಿನ ಹಿರಿ-ಕಿರಿಯ ಕಲಾವಿದರು ಸಂಗಿತಾಸಕ್ತರನ್ನು ತಮ್ಮಗಾಯನ-ವಾದನಗಳೊಂದಿಗೆ ನಾದ ಲೋಕದಲ್ಲಿ ತೇಲಿಸಲಿದ್ದಾರೆ.
ಬೆಳಗ್ಗೆ 9 ಗಂಟೆಗೆ ಆರಂಭಗೊಳ್ಳುವ ಸಂಗೀತ ಸಮ್ಮೇಳನಕ್ಕೆ ಪಂ. ಕೃಷ್ಣೇಂದ್ರ ವಾಡಿಕರ ಚಾಲನೆ ನೀಡುವರು. ಯುವ ಪ್ರತಿಭೆ ಧಾರವಾಡದ ಹೇಮಂತ ಜೋಶಿ ಅವರಿಂದ ತಬಲಾ ಸೋಲೊ ಮೂಡಿಬರಲಿದೆ. ನವನಗರದ ಶಿವಾನಿ ಕವಠೇಕರ ಅವರಿಂದ ಗಾಯನ
ಪ್ರಸ್ತುತಗೊಳ್ಳಲಿದೆ. ಧಾರವಾಡದ ಬ ಸವರಾಜ ವಂದಲಿ ಅವರ ಗಾಯನ, ನವಲಗುಂದದ ಗುರುಬಸವ ಮಹಾಮನೆ ಅವರಿಂದ ವಯೋಲಿನ್ ಸೋಲೊ, ಧಾರವಾಡದ ವಿಜಯಕುಮಾರ ಪಾಟೀಲ ಅವರ ಗಾಯನ, ಡಾ. ಗಂಗೂಬಾಯಿ ಹಾನಗಲ್ ಗುರುಕುಲದ ಉಸ್ತಾದ ಫಯ್ಯಾಜ್ಖಾನ್ ಅವರಿಂದ ಗಾನ ಸುಧೆ ಹರಿದುಬರಲಿದೆ. ನಂತರ ನಡೆಯುವ ಸಿತಾರ ಹಾಗೂ ಬಾನ್ಸುರಿ ಜುಗಲ್ಬಂದಿಯಲ್ಲಿ ಉ. ಶಫೀಕ ಖಾನ್ ಹಾಗೂ ಸಮೀರ ರಾವ್ ಅವರ
ದ್ವಂದ್ವವಾದನಗಳ ಝೇಂಕಾರ ಮೊಳಗಲಿದೆ. ಹಿರಿಯ ಗಾಯಕ ಪಂ. ಬಾಲಚಂದ್ರ ನಾಕೋಡ ಅವರ ಗಾಯನದೊಂದಿಗೆ ಸಮ್ಮೇಳನಕ್ಕೆ ತೆರೆ ಬೀಳಲಿದೆ.
ಸಂಜೆ 5 ಗಂಟೆ ನಡೆಯುವ ಸಭಾ ಕಾರ್ಯಕ್ರಮದ ಸಾನ್ನಿಧ್ಯವನ್ನು ಹುಬ್ಬಳ್ಳಿಯ ರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮಿ ರಘುವೀರಾನಂದಜಿ ವಹಿಸುವರು. ಮುಖ್ಯ ಅತಿಥಿಯಾಗಿ ಧಾರವಾಡದ ಬಾಲವಿಕಾ ಸ ಅಕ್ಯಾಡೆಮಿಯ ಜಂಟಿ ನಿರ್ದೇಶಕಿ ಭಾರತಿ ಶೆಟ್ಟರ ಆಗಮಿಸುವರು. ತ್ರಯಿ ಕ ಲಾ ಸಂಸ್ಥೆಯ ಸಂಸ್ಥಾಪಕ ಗೋಪಾಲ ಜೋಶಿ ಅಧ್ಯಕ್ಷತೆ ವಹಿಸುವರು. ಸಂಸ್ಥೆಯ ಸಂಚಾಲಕಿ ಅಕ್ಷತಾ ಜೋಶಿ ಉಪಸ್ಥಿತರಿರುವರು.
ಸಂಗೀತ ಸಮ್ಮೇಳನದ ಸಹಕಲಾವಿದರಾಗಿ ಬೆಂಗಳೂರಿನ ಕೇಶವ ಜೋಶಿ, ಪಂ. ರಾಜೇಂದ್ರ ನಾಕೋಡ, ಧಾರವಾಡದ ಡಾ. ಶ್ರೀಹರಿ ದಿಗ್ಗಾವಿ ಅವರ ತಬಲಾ ಹಾಗೂ ಮೇಘನಾ ಅಥಣಿಕರ, ಚಿದಂಬರ ಜೋಶಿ, ಯಶವಂತ ಥಿಟ್ಟೆ, ಗುರುಪ್ರಸಾದ ಹೆಗಡೆ ಪಾಲ್ಗೊಳ್ಳಲಿದ್ದಾರೆ.