

ಮಂಗಳೂರು : ಮೈಸೂರಿನ ಜೆಎಸ್‌ಎಸ್ ಸಂಗೀತ ಸಭಾ ಟ್ರಸ್ಟ್ ವತಿಯಿಂದ ನೀಡಲಾಗುವ ಸಂಗೀತ ಸೇವಾ ನಿಧಿ ಪ್ರಶಸ್ತಿಯನ್ನು ಮಣಿ ಕೃಷ್ಣಸ್ವಾಮಿ ಅಕಾಡೆಮಿ ಸಂಸ್ಥೆಯ ಕಾರ್ಯದರ್ಶಿ ಪಿ.ನಿತ್ಯಾನಂದ ರಾವ್ ಅವರಿಗೆ ಸಂಗೀತ ಸಭಾ ಟ್ರಸ್ಟ್‌ನ 29ನೇ ಸಂಗೀತ ಸಮ್ಮೇಳನದಲ್ಲಿ ಪ್ರದಾನ ಮಾಡಲಾಯಿತು. ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ , ಸಮ್ಮೇಳನದ ಅಧ್ಯಕ್ಷ ಡಾ.ಆರ್.ವಿಶ್ವೇಶ್ವರನ್, ಇಸ್ರೋ ಸಂಸ್ಥೆಯ ಮಾಜಿ ಅಧ್ಯಕ್ಷ ಡಾ. ಎ.ಎಸ್.ಕಿರಣ್ ಕುಮಾರ್, ಮೈಸೂರು ವಿ.ವಿ.ಕುಲಪತಿ ಪ್ರೊ.ಎನ್.ಕೆ.ಲೋಕನಾಥ್, ಜೆಎಸ್‌ಎಸ್ ಸಂಗೀತ ಸಭಾದ ಅಧ್ಯಕ್ಷ ರಮೇಶ್ ಕಣ್ಣನ್ ಉಪಸ್ಥಿತರಿದ್ದರು.