

ಮಂಗಳೂರು : ದೇಶದ ಪ್ರತಿಷ್ಠಿತ ವೇದಿಕೆಗಳಲ್ಲಿ ಯಶಸ್ವಿಯಾಗಿ ನಡೆದ ‘ಉತ್ತರ್-ದಕ್ಷಿಣ್’ ಸರಣಿ ಸಂಗೀತ ಕಾರ್ಯಕ್ರಮ
ಜ.28ರಂದು ಸಾಯಂಕಾಲ 5.30ಕ್ಕೆ ನಗರದ ಹಂಪನಕಟ್ಟೆಯ ವಿ.ವಿ.ಕಾಲೇಜಿನ ರವೀಂದ್ರ ಕಲಾಭವನದಲ್ಲಿ ನಡೆಯಲಿದೆ.
ಸಂಗೀತ ಭಾರತಿ ಪ್ರತಿಷ್ಠಾನದ ಸಹಯೋಗದಲ್ಲಿ ಮುಂಬೈನ ವಿವಿದ್ ಆರ್ಟ್ಸ್ ಆಂಡ್ ಎಂಟರ್‌ಟೈನ್‌ಮೆಂಟ್ ಈ ಕಾರ್ಯಕ್ರಮವನ್ನು ಪ್ರಸ್ತುತ ಪಡಿಸುತ್ತಿದೆ. ಉತ್ತರ್-ದಕ್ಷಿಣ್ ಸರಣಿ ಶಾಸ್ತ್ರೀಯ ಸಂಗೀತ ಪ್ರಿಯರ ಅಚ್ಚುಮೆಚ್ಚಿನ ಕಛೇರಿಗಳಲ್ಲಿ ಒಂದಾಗಿದದು ಇದು ಉತ್ತರಾದಿ ಮತ್ತು ದಕ್ಷಿಣಾದಿ ಸಂಗೀತದೊಂದಿಗೆ ಪ್ರಾದೇಶಿಕ ಸಾಮರಸ್ಯಕ್ಕೆ ಕೊಡುಗೆ ನೀಡುತ್ತದೆ. ಮುಂಬೈ, ದೆಹಲಿ, ಹೈದರಾಬಾದ್, ಬೆಂಗಳೂರು, ರಾಂಚಿ ಬಳಿಕ ಈಗ ಮಂಗಳೂರಿನಲ್ಲಿ 13ನೇ ಆವೃತ್ತಿಯ ಸಂಗೀತ ಕಛೇರಿ ಆಯೋಜಿಸಲಾಗಿದೆ.
ವಿದ್ವಾನ್ ಮೈಸೂರು ನಾಗರಾಜ್ ಮತ್ತು ಡಾ.ಎಂ ಮಂಜುನಾಥ್ ಅವರ ಪಿಟೀಲು ಯುಗಳ ವಿಶಿಷ್ಟ ಸಂಯೋಜನೆಗೆ ವಿದ್ವಾನ್ ಅರ್ಜುನ್ ಕುಮಾರ್ ಮತ್ತು ವಿದ್ವಾನ್ ಗಿರಿಧರ್ ಉಡುಪ ಅವರ ಮೃದಂಗ ಮತ್ತು ಘಟಂನಲ್ಲಿ ಸಾಥ್ ನೀಡಲಿದ್ದಾರೆ. ಬಳಿಕ ಪದ್ಮಶ್ರೀ ಪುರಸ್ಕೃತ
ಪಂಡಿತ್ ವೆಂಕಟೇಶ್ ಕುಮಾರ್ ಅವರಿಂದ ಹಿಂದೂಸ್ತಾನೀ ಗಾಯನ ನಡೆಯಲಿದೆ. ಇವರಿಗೆ ನರೇಂದ್ರ ಎಲ್ ನಾಯಕ್
ಹಾರ್ಮೋನಿಯಂನಲ್ಲಿ ಮತ್ತು ಕೇಶವ್ ಜೋಶಿ ತಬಲದಲ್ಲಿ ಸಾಥ್ ನೀಡಲಿದ್ದಾರೆ.
ಈ ಕಾರ್ಯಕ್ರಮಕ್ಕೆ ಸಂಗೀತಾಸಕ್ತರಿಗೆ ಮುಕ್ತ ಪ್ರವೇಶಾವಕಾಶವಿದೆ ಎಂದು ಸಂಗೀತ ಭಾರತಿ ಪ್ರತಿಷ್ಠಾನದ ಉಪಾಧ್ಯಕ್ಷ
ನರೇಂದ್ರ ಎಲ್. ನಾಯಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.