ಬೆಂಗಳೂರು : ಮಹಾ ಮಹೋಪಾಧ್ಯಾಯ ಪಂಡಿತ್ ಆರ್.ವಿ.ಶೇಷಾದ್ರಿ ಪುಣ್ಯಸ್ಮತಿ ಸಮಿತಿ ಹಾಗೂ ನಾದವಾಹಿತಿ ಶ್ರೀದತ್ತ ಸಂಗೀತ ವಿದ್ಯಾನಿಕೇತನದ 40ನೇ ವಾರ್ಷಿಕೋತ್ಸವದ ಅಂಗವಾಗಿ ನೀಡುತ್ತಿರುವ ಸಂಗೀತ ಶಿರೋಮಣಿ ಪ್ರಶಸ್ತಿ ಪ್ರದಾನ ಸಮಾರಂಭವು ಅ.25 (ಶನಿವಾರ) ನಡೆಯಲಿದೆ.
ಕನ್ನಡ ಸಾಹಿತ್ಯ ಪರಿಷತ್ತಿನ ಮಧ್ಯಾಹ್ನ 3 ಗಂಟೆಗೆ ನಡೆಯಲಿರುವ ಸಮಾರಂಭದಲ್ಲಿ ಬೇಲಿಮಠದ ಶ್ರೀ ಶಿವರುದ್ರ ಸ್ವಾಮೀಜಿ, ಪದ್ಮಶ್ರೀ ಡಾ.ಸಿ.ಆರ್.ಚಂದ್ರಶೇಖರ್, ಹಿಂದೂಸ್ತಾನಿ ಗಾಯಕ ಪಂಡಿತ್ ಡಾ.ವಿ.ಎಂ.ನಾಗರಾಜ್ ಪಾಲ್ಗೊಳ್ಳಲಿದ್ದು, ಅಂತರಾಷ್ಟ್ರೀಯ ತಬಲಾ ವಾದಕ ಪಂಡಿತ್ ಸತೀಶ್ ಹಂಪಿಹೊಳಿ ಮತ್ತು ಗಾಯಕ ಪಂಡಿತ್ ಗೋಪಾಲ್ ಕೆ.ರಾಯಚೂರ್ ಅವರುಗೆ ಸಂಗೀತ ಶಿರೋಮಣಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ನಂತರ ಸಂಸ್ಥೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿದೆ.