

ಸತ್ತಿಗೇರಿ: ಸಮಾಜಮುಖಿ ಕಾರ್ಯ ಹಾಗೂ ಬಡವರ ಏಳಿಗೆಗೆ ಸದಾ ಶ್ರಮಿಸುತ್ತಿದ್ದ ಈರಣ್ಣ ಸಂಗಪ್ಪನವರ ಎಲ್ಲರಿಗೂ ಮಾದರಿಯಾಗಿದ್ದರು ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.
ಗ್ರಾಮದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಗ್ರಾಪಂ ಮಾಜಿ ಅಧ್ಯಕ್ಷ ದಿ.ಈರಣ್ಣ್ಣ ಸಂಗಪ್ಪನವರ ನಾಲ್ಕನೇ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಸರಳ ಸಜ್ಜನಿಕೆಯ ಮೂಲಕ ಜನರ ಮನದಲ್ಲಿ ಮನೆಮಾಡಿ ಹೃದಯ ವೈಶಾಲ್ಯದಿಂದ ಎಲ್ಲರೊಂದಿಗೆ ಬೆರೆಯುತ್ತಿದ್ದ ಸಂಗಪ್ಪನವರ ಆದರ್ಶ ಸ್ಮರಣೀಯ ಎಂದರು. ದಿ.ಈರಣ್ಣ್ಣ ಸಂಗಪ್ಪನವರ ಪತ್ನಿ ದೀಪಾ ಸಂಗಪ್ಪನವರ, ಪ್ರಕಾಶ ವಾಲಿ, ಬೆಮುಲ್ ನಿರ್ದೇಶಕ ಶಂಕರ ಇಟ್ನಾಳ, ಎಪಿಎಂಸಿ ಅಧ್ಯ ನೀಲಕಂಠ ಸಿದ್ದಬಸನ್ನವರ, ಮಲಿಕ್ಸಾಬ್ ಬಾಗವಾನ, ಶ್ರೀಶೈಲ ಸಂಗಪ್ಪನವರ, ಎಪಿಎಂಸಿ ಅಧ್ಯ ಚಂದ್ರು ಜಂಬ್ರಿ, ಪಿಕೆಪಿಎಸ್ ಅಧ್ಯ ವಿಠ್ಠಲ ಬಂಟನೂರ, ವಿಠ್ಠಲಗೌಡ ದೇವರಡ್ಡಿ, ಉಮೇಶ ಮಾಗುಂಡನವರ, ಉಮೇಶ ಪಾಟೀಲ, ಗುರಪ್ಪ ಶೆಟ್ಟರ, ಚಾಯಪ್ಪ ಹುಂಡೇಕಾರ, ಶಿವಾನಂದ ಕರಿಗೋಣ್ಣವರ ಇತರರಿದ್ದರು.