ಸಂಘನಿಕೇತನ ಗಣೇಶ ವಿಗ್ರಹದ ವೈಭವದ ಶೋಭಾಯಾತ್ರೆ

mng-sep23-sanganiketana1
Published on

ಮಂಗಳೂರು: ಕೇಶವ ಸ್ಮತಿ ಸಂವರ್ಧನ ಸಮಿತಿ ಆಶ್ರಯದಲ್ಲಿ ಸಂಘನಿಕೇತನಲ್ಲಿ 75ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದಲ್ಲಿ ಪೂಜಿಸಲ್ಪಟ್ಟ ಶ್ರೀ ಗಣೇಶನ ವಿಗ್ರಹದ ಶೋಭಾಯಾತ್ರೆ ಶನಿವಾರ ವೈಭವದಿಂದ ನಡೆಯಿತು.


ಉತ್ಸವ ಸ್ಥಳದಿಂದ ಕೇರಳದ ಚೆಂಡೆ, ಶಂಖ, ಜಾಗಟೆ, ಕುಣಿತ ಭಜನೆ ಹಾಗೂ ವಿವಿಧ ವಾದ್ಯ ಘೋಷಗಳೊಂದಿಗೆ ಹೊರಟು ಮಣ್ಣಗುಡ್ಡ, ನ್ಯೂಚಿತ್ರ ಜಂಕ್ಷನ್, ರಥಬೀದಿಯಾಗಿ ಸಾಗಿ ಬಂದು ಪೂಜೆ ಸಲ್ಲಿಸಿ, ವಂದೇ ಮಾತರಂ, ಧ್ವಜಾವತರಣ ನಂತರ ಶ್ರೀ ಮಹಾಮಾಯ ಕೆರೆಯಲ್ಲಿ ವಿಸರ್ಜಿಸಲಾಯಿತು. ಶೋಭಾಯಾತ್ರೆ ವೇಳೆ ಭಕ್ತರು ಅಲ್ಲಲ್ಲಿ ಶ್ರೀ ಗಣೇಶನಿಗೆ ಆರತಿ ಅರ್ಪಿಸಿದರು. ಶೋಭಾಯಾತ್ರೆ ಸಾಗುವ ಬೀದಿಯನ್ನು ಹೂವು, ವಿದ್ಯುತ್ ದೀಪ, ಭಗವಾಧ್ವಜಗಳಿಂದ ಅಲಂಕರಿಸಿದ್ದರು.


ಗಣೇಶೋತ್ಸವ ಸಮಿತಿ ಅಧ್ಯಕ್ಷ ಪ್ರವೀಣ್ ಕುಮಾರ್, ಉಪಾಧ್ಯಕ್ಷರಾದ ಕೆ.ಪಿ.ಟೈಲರ್, ಸತೀಶ್ ಪ್ರಭು, ಬಾಲಕೃಷ್ಣ ಕೊಟ್ಟಾರಿ, ಆನಂದ ಪಾಂಗಾಳ, ಪ್ರ.ಕಾರ್ಯದರ್ಶಿ ಸುರೇಶ್ ಕಾಮತ್ ಮೊದಲಾದವರು ಉಪಸ್ಥಿತರಿದ್ದರು. ಬರ್ಕೆ ಪೊಲೀಸರು ಬಂದೋಬಸ್ತ್ ಏರ್ಪಡಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net