

ಹೂಲಿ: ಗ್ರಾಮದ ಪವಾಡ ಪುರುಷ ಗುರು ಬಾಲಲೀಲಾ ಸಂಗಮೇಶ್ವರ ಸ್ವಾಮೀಜಿ 92ನೇ ಪುಣ್ಯತಿಥಿ ಅಂಗವಾಗಿ ಜರುಗುವ ಗುರು ಬಾಲಲೀಲಾ ಸಂಗಮೇಶ್ವರ ಸ್ವಾಮೀಜಿ ಜಾತ್ರೆ ನಿಮಿತ್ತ ಸೋಮವಾರ ರಥೋತ್ಸವವು ವೆಭವಯುತವಾಗಿ ಜರುಗಿತು.
ಶ್ರೀಶೆಲ ಜಗದ್ಗುರು ಡಾ. ಚನ್ನ ಸಿದ್ದರಾಮ ಶಿವಾಚಾರ್ಯ ಸ್ವಾಮೀಜಿ ಆಶೀರ್ವಾದದೊಂದಿಗೆ ಜಾತ್ರಾ ಕಾರ್ಯಕ್ರಮ ನಡೆದವು. ಗುರು ಬಾಲ ಲೀಲಾ ಸಂಗಮೇಶ್ವರ ಮಠದ ಪೀಠಾಧಿಪತಿ ಉಮೇಶ್ವರ ಶಿವಾಚಾರ್ಯ ಸ್ವಾಮೀಜಿ ಸಮ್ಮುಖ ವಹಿಸಿದ್ದರು. ಹೂಲಿ ಅಜ್ಜನ ಪಲ್ಲಕ್ಕಿ ಉತ್ಸವವು ಸಾಂಬೆನವರಮಠದಿಂದ ಪ್ರಮುಖ ಬೀದಿಗಳಲ್ಲಿ ಹಾಯ್ದು ಮೂಲ ಹಿರೇಮಠಕ್ಕೆ ತಲುಪಿತು. ಮಹಾಮಂಗಳಾರತಿ ನಂತರ ಮರಳಿ ಮಠಕ್ಕೆ ತಲುಪಿತು. ಡೊಳ್ಳು,ಭಜನೆ ಸಕಲ ವಾದ್ಯಗಳೊಂದಿಗೆ ಜಾತ್ರೆ ಕಳೆ ಹೆಚ್ಚಿಸಿದವು. ಭಕ್ತರಿಗೆ ಮಹಾಪ್ರಸಾದ ವ್ಯವಸ್ಥೆ ಏರ್ಪಡಿಸಲಾಗಿತ್ತು. ಭಕ್ತರು ಹೂಲಿ ಅಜ್ಜನ ಅಂಗಾರ ದೇಶಕ್ಕೆಲ್ಲ ಬಂಗಾರ ಜಯಘೋಷ ಕೂಗಿದರು. ಭಜನೆ ಹಾಗೂ ವಿವಿಧ ಸಾಂಸತಿಕ ಕಾರ್ಯಕ್ರಮಗಳು ಸಂಭ್ರಮದಿಂದ ಜರುಗಿದವು. ಸುತ್ತಮುತ್ತಲಿನ ಮನಿಕಟ್ಟಿ, ಹೂಲಿಕಟ್ಟಿ , ಸಿರಸಂಗಿ, ಗೋರೋಬಾಳ, ಬಸಿಡೋನಿ, ಹರಳಕಟ್ಟ , ಕಗದಾಳ, ಉಗರಗೋಳ, ಹರ್ಲಾಪೂರ, ಕುರುವಿನಕೊಪ್ಪದ ಗ್ರಾಮಗಳ ಭಕ್ತರು ಪಾಲ್ಗೊಂಡಿದ್ದರು. ಬಿಎಸ್ಎನ್ಎಲ್ ಸಂಪರ್ಕ ಸಲಹಾ ಸಮಿತಿಯ ನಿರ್ದೇಶಕ ಹಾಗೂ ಸವದತ್ತಿ ಎಪಿಎಂಸಿ ಮಾಜಿ ಅಧ್ಯ ಜಗದೀಶ ಹನಸಿ, ಮಹಾಂತಸ್ವಾಮಿ ಹಿರೇಮಠ, ಸಾಹಿತಿ ವೈ.ಎಂ. ಯಾಕೋಳ್ಳಿ ಇತರರಿದ್ದರು.