ಸಂಗಮೇಶ್ವರ ರಥೋತ್ಸವ ಸಂಪನ್ನ

Sangameshwara Chariot Festival is complete
ಸುಕ್ಷೇತ್ರ ಕೂಡಲಸಂಗಮದಲ್ಲಿ ಶುಕ್ರವಾರ ಸಂಜೆ ಸಂಗಮನಾಥನ ರಥೋತ್ಸವ ಸಾವಿರಾರು ಭಕ್ತರ ನಡುವೆ ಅದ್ದೂರಿಯಾಗಿ ನಡೆಯಿತು. ರಾಜ್ಯದ ವಿವಿಧ ಭಾಗಗಳಿಂದ ಭಕ್ತು ಆಗಮಿಸಿದ್ದರು.
Published on

ಕೂಡಲಸಂಗಮ : ಕ್ಷೇತ್ರಾಧಿಪತಿ ಸಂಗಮನಾಥನ ರಥೋತ್ಸವ ಶುಕ್ರವಾರ ಸಂಜೆ ಅದ್ದೂರಿಯಾಗಿ ಜರುಗಿತು. ರಾಜ್ಯದ ವಿವಿಧ ಭಾಗದಿಂದ ಅಪಾರ ಭಕ್ತರು ಸಮಾವೇಶಗೊಂಡು ರಥವನ್ನು ಎಳೆಯುವುದರ ಮೂಲಕ ಸಂಭ್ರಮಿಸಿದರು.

ರಥೋತ್ಸವಕ್ಕೆ ಗಂಜಿಹಾಳದಿಂದ ತಳಿರು ತೋರಣ, ನಂದಿಕೋಲಿನ ಕುಣಿತ, ಬಾಳೆಕಂಬದ ಮೆರವಣಿಗೆ, ಬೆಳಗಲ್ಲದಿಂದ ರಥೋತ್ಸವದ ಹಗ್ಗ, ಇದ್ದಲಗಿಯ ಹಿಲಾಲ, ಗುಳೆದ್ದಗುಡ್ಡದ ಹುಚ್ಚಯನ ಕಲಶ ಮುಂತಾದವುಗಳನ್ನು ತರಲಾಗಿತ್ತು.

ರಥೋತ್ಸವದಲ್ಲಿ ಶಾಸಕ ವಿಜಯಾನಂದ ಕಾಶಪ್ಪನವರ, ಜಿಲ್ಲಾ ಪಂಚಾಯತಿ ಮಾಜಿ ಅಧ್ಯೆಕ್ಷೆ ವೀಣಾ ಕಾಶಪ್ಪನವರ, ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರುಗಳಾದ ಬಸವಜಯ ಮೃತ್ಯುಂಜಯ ಸ್ವಾಮೀಜಿ, ಕೂಡಲಸಂಗಮ ಅಭಿವೃದ್ಧಿ ಮಂಡಳಿಯ ಆಯುಕ್ತ ಮಹಾದೇವ ಮುರಗಿ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net