

ವಿಜಯವಾಣಿ ಸುದ್ದಿಜಾಲ ಉಡುಪಿ
ಹಳೆಯ ಸ್ನೇಹಿತ ಕಲಾವಿದರು ಎರಡು ದಶಕದ ಬಳಿಕ ಒಂದೆಡೆ ಸೇರಿ ತಮ್ಮ ಕಲಾ ನೈಪುಣ್ಯತೆ ಪ್ರದರ್ಶಿಸುವುದರೊಂದಿಗೆ ಕಲಿಸಿದ ಗುರುಗಳಿಗೆ ವಂದನೆ ಸಲ್ಲಿಸುತ್ತಿರುವುದು ಅತ್ಯಂತ ಅರ್ಥಪೂರ್ಣವಾಗಿದೆ. ಉಡುಪಿಯ ಕಲಾವಲಯದಲ್ಲಿ ಸಾಕಷ್ಟು ಉತ್ತಮ ಕಲಾ ಪ್ರತಿಭೆಗಳಿದ್ದು, ಅವರನ್ನು ಪೋಷಿಸಿ, ಪ್ರೋತ್ಸಾಹಿಸಬೇಕಿದೆ. ತನ್ಮೂಲಕ ಉಡುಪಿಯ ಕಲಾ ಪರಂಪರೆ ಜಗತ್ತಿಗೆ ತಿಳಿಯುವಂತಾಗಬೇಕು ಎಂದು ಮಧುರಂ ವೈಟ್ ಲೋಟಸ್ನ ಆಡಳಿತ ನಿರ್ದೇಶಕ ಅಜಯ್ ಪಿ. ಶೆಟ್ಟಿ ಆಶಯ ವ್ಯಕ್ತಪಡಿಸಿದರು.
ಕಾವಿ ಕಲಾವಿದ ಡಾ. ಜನಾರ್ದನ ರಾವ್ ಹಾವಂಜೆ ಕಾರ್ಯಕ್ರಮ ನಿರೂಪಿಸಿದರು.
ಉತ್ತಮವಾಗಿ ಕಲಿಸುವ ಪದ್ಧತಿಯಿಂದ ಮಾತ್ರ ಓರ್ವ ಗುರು ಶ್ರೇಷ್ಠರಾಗುವುದಿಲ್ಲ. ಆ ಗುರುವಿನ ಖ್ಯಾತಿ ಹೆಚ್ಚಲು ಉತ್ತಮ ಶಿಷ್ಯಂದಿರೂ ದೊರಕಬೇಕಾಗುತ್ತದೆ. ಈ ಎಲ್ಲ ಹಳೆಯ ವಿದ್ಯಾರ್ಥಿಗಳು ತಮ್ಮ ಕಲಿಕೆಯ ಅವಧಿಯಲ್ಲಿಯೇ ನಾಳಿನ ಭರವಸೆಯುಳ್ಳ ಕಲಾವಿದರಾಗುವ ಎಲ್ಲ ಲಕ್ಷಣ ಇರುವುದನ್ನು ಅಂದು ಕಂಡಿದ್ದೆ. ಅದಿಂದು ನಿಜವಾಗಿದೆ. ಕಲಾ ಪ್ರದರ್ಶನದ ಮೂಲಕ ಗುರುವಿಗೆ ನಮನ ಸಲ್ಲಿಸಿರುವುದು ಗುರು-ಶಿಷ್ಯರ ಬಾಂಧವ್ಯಕ್ಕೆ ಉತ್ತಮ ನಿದರ್ಶನ. | ವಿಶ್ವೇಶ್ವರ ಪರ್ಕಳ. ಕಲಾಶಾಲೆಯ ಮಾಜಿ ಪ್ರಾಂಶುಪಾಲ.