ಆರಾಧ್ಯ ಸಮುದಾಯಕ್ಕೆ ವಿಶೇಷ ಪ್ರಾತಿನಿಧ್ಯ: ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ.ಸಿದ್ದರಾಮಯ್ಯ ಹೇಳಿಕೆ

Sanga
Published on

ಮಂಡ್ಯ: ಅತ್ಯಂತ ಪಾಂಡಿತ್ಯವನ್ನು ಹೊಂದಿದವರು ಆರಾಧ್ಯ ಸಮುದಾಯ. 800 ವರ್ಷದ ಹಿಂದಿನಿಂದಲೂ ಬ್ರಾಹ್ಮಣ್ಯಕ್ಕೆ ಅದರದೇ ಪ್ರಾಮುಖ್ಯತೆಯನ್ನು ಕೊಡಲಾಗಿದೆ. ಮಹಾರಾಜರನ್ನೇ ಪ್ರಶ್ನೆ ಮಾಡುವ ಮನೋಭಾವ ಇದ್ದದ್ದು ಈ ಸಮುದಾಯಗಳಿಗೆ ಮಾತ್ರ. ಹಾಗಾಗಿ ಮೈಸೂರು ಪ್ರಾಂತ್ಯದಲ್ಲಿ ವಿಶೇಷ ಪ್ರಾತಿನಿಧ್ಯ ನೀಡಲಾಗಿದೆ. ಹಳೇ ಮೈಸೂರಿನ ಭಾಗದಲ್ಲಿ ಇದು ಹೆಚ್ಚಿದೆ ಎಂದು ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ.ಸಿದ್ದರಾಮಯ್ಯ ಹೇಳಿದರು.

ನಗರದ ಪಿಇಎಸ್ ಕಾಲೇಜಿನ ವಿವೇಕಾನಂದ ರಂಗಮಂದಿರದಲ್ಲಿ ಭಾನುವಾರ ಆಯೋಜಿಸಿದ್ದ ಆರಾಧ್ಯ ಜ್ಯೋತಿಷ್ಯ ಮತ್ತು ಪುರೋ ಹಿತರ ಸಂಘ ಉದ್ಘಾಟಿಸಿ ಮಾತನಾಡಿದರು. ದೇಶಕ್ಕೆ ಆಧ್ಯಾತ್ಮಿಕ ಸಂಸ್ಕೃತಿ ತಂದುಕೊಟ್ಟ ಆರಾಧ್ಯ ಸಮುದಾಯ ನಶಿಸಿ ಹೋಗದಂತೆ ಕಾಪಾಡಬೇಕಾಗಿದೆ. ಆರಾಧ್ಯ ಸಮುದಾಯದ ಜತೆಗೆ ಸಮಾಜ ದಲ್ಲಿ ಕೆಲವು ಸಮುದಾಯಗಳು ನಶಿಸುತ್ತಿವೆ. ಅವುಗಳನ್ನು ಉಳಿಸಿಕೊಳ್ಳುವ ಮನೋಭಾವ ಸಮಾಜದ ಮುಖ್ಯಸ್ಥರಲ್ಲಿ ಬರಬೇಕಿದೆ. ಮಹಾನ್ ಧರ್ಮವೆಂದರೆ ಆರಾಧ್ಯ ಸಮುದಾಯ. ಆದರೆ ಸಮುದಾಯಗಳು ನಶಿಸುತ್ತಿವಿಯೇನೋ ಎಂಬ ಭಾವನೆ ಮೂಡಿದೆ. ಮುಂದೆ ಗುರು ಇರುವಂತಹ ಈ ಸಮುದಾಯಗಳು ಇರದೇ ಹೋದರೆ ಹಿಂದೂ ಸಮಾಜ ಉಳಿಯುವುದಾದರೂ ಹೇಗೆ ಎಂದು ಪ್ರಶ್ನಿಸಿದರು.

ಅಂಚೆದೊಡ್ಡಿ ಗುರುಮಠದ ಅಧ್ಯಕ್ಷ ಎಸ್.ನಾಗಭೂಷಣ ಆರಾಧ್ಯ, ಒಕ್ಕಲಿಗರ ಸಂಘದ ನಿರ್ದೇಶಕ ಅಶೋಕ್ ಜಯರಾಂ, ಮಂಡ್ಯ ಉಪವಿಭಾಗಾಧಿಕಾರಿ ಆರ್.ಐಶ್ವರ್ಯಾ, ಜ್ಯೋತಿಷಿ ಮಲ್ಲಾರಾಧ್ಯ, ಸಂಘದ ಕೆ.ಎನ್.ಜಯಶಂಕರ ಆರಾಧ್ಯ, ಶಿವಕುಮಾರ ಆರಾಧ್ಯ, ಮಹೇಶ್‌ಚಂದ್ರಗುರು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net