ಗ್ರಾಮಗಳ ಸಮಗ್ರ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲು ಶಾಸಕ ಈ.ತುಕಾರಾಮ್‌ರಿಗೆ ಮನವಿ

221122 Sanduru Sushilanagara Development appeal
ಸಂಡೂರು ತಾಲೂಕು ಸುಶೀಲಾನಗರದ ಅಭಿವೃದ್ಧಿಗೊಳಿಸಬೇಕೆಂದು ಒತ್ತಾಯಿಸಿ ಶಾಸಕ ಈ.ತುಕಾರಾಮ್‌ಗೆ ಮನವಿ ಸಲ್ಲಿಸಿದರು.
Published on

ಸಂಡೂರು: ಸಂಡೂರು ತಾಲೂಕು ಸುಶೀಲಾನಗರದ ಅಭಿವೃದ್ಧಿಗೊಳಿಸಬೇಕೆಂದು ಒತ್ತಾಯಿಸಿ ಗಣಿ ಕಂಪನಿಗಳ ವಿರುದ್ಧ ನ.24ರಿಂದ ಗ್ರಾಪಂ ಸರ್ವ ಸದಸ್ಯರು ಹಾಗೂ ಗ್ರಾಮಸ್ಥರು ಉಪವಾಸ ಸತ್ಯಾಗ್ರಹ ಕೈಗೊಳ್ಳಲಿದ್ದಾರೆ ಎಂದು ಗ್ರಾಪಂ ಅಧ್ಯಕ್ಷ ಎಲ್.ಅಂಬರೀಷ ನಾಯ್ಕ ಹೇಳಿದರು.

ಪಟ್ಟಣದ ಗುರುಭವನದ ಬಳಿ ಶಾಸಕ ಈ.ತುಕಾರಾಮ್‌ಗೆ ಸೋಮವಾರ ಮನವಿಪತ್ರ ಸಲ್ಲಿಸಿ ಮಾತನಾಡಿ, ಸುಶೀಲಾನಗರ ಗ್ರಾಪಂ ವ್ಯಾಪ್ತಿಗೆ 5 ಹಳ್ಳಿಗಳು ಬರುತ್ತವೆ. ಇವುಗಳನ್ನು ಅಭಿವೃದ್ಧಿಪಡಿಸುವಂತೆ ಹಲವು ಬಾರಿ ಮನವಿ ಮಾಡಿದರೂ ಅಧಿಕಾರಿಗಳು ಕಿವಿಗೆ ಹಾಕಿಕೊಳ್ಳುತ್ತಿಲ್ಲ ಎಂದು ದೂರಿದರು.

ಕಾನೂನು ಸಲಹೆಗಾರ ಮಲ್ಲಿಕಾರ್ಜುನ ಮಾತನಾಡಿ, ಗ್ರಾಪಂ ವ್ಯಾಪ್ತಿಯಲ್ಲಿನ ರೈತರಿಗೆ ಧೂಳಿನ ಬೆಳೆ ಪರಿಹಾರ ಎಕರೆಗೆ 10ಸಾವಿರ ರೂ. ಗ್ರಾಮದ 2,500 ಮನೆಗಳ ನಿವಾಸಿಗಳಿಗೆ ಧೂಳಿನ ಪರಿಹಾರವಾಗಿ 1ಮನೆಗೆ ವರ್ಷಕ್ಕೆ 25 ಸಾವಿರ ರೂ., ವೃದ್ಥಾಪ್ಯ ಹಾಗೂ ವಿಧವಾ ವೇತನಗಳನ್ನು ಒಬ್ಬರಿಗೆ ತಿಂಗಳಿಗೆ 3ಸಾವಿರ ರೂ.ನೀಡಬೇಕು. ಪದವೀಧರರಿಗೆ ಹಾಗೂ ಸ್ನಾತಕೋತ್ತರ ಪದವೀಧರರಿಗೆ ವರ್ಷಕ್ಕೆ 30 ಸಾವಿರ ರೂ. ನೀಡಬೇಕು. ಸಿಸಿ ರಸ್ತೆ, ಚರಂಡಿ, ಹಳ್ಳಿಗಳಲ್ಲಿರುವ ಭವನಗಳು, ಶಾಲಾ ಕಟ್ಟಡಗಳು, ಆಟದ ಮೈದಾನಗಳನ್ನು ನಿರ್ಮಿಸಿ ಕೊಡಬೇಕು ಎಂದು ಹಲವು ಬಾರಿ ಮನವಿ ಮಾಡಲಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net