ವೃತ್ತಿಯಿಂದ ಮಹಿಳೆಯರ ಬಿಡುಗಡೆ ಅಮಾನವೀಯ

090522 Sanduru Biciyuta Employees Appeal MLA
ಸಂಡೂರಿನಲ್ಲಿ ಶಾಸಕ ಈ.ತುಕಾರಾಮ್‌ಗೆ ತಾಲೂಕು ಬಿಸಿಯೂಟ ನೌಕರರ ಸಂಘ ಸೋಮವಾರ ಸಲ್ಲಿಸಿ, ನಿವೃತ್ತಿ ಹೆಸರಿನಲ್ಲಿ ಬಡ ಮಹಿಳೆಯರನ್ನು ತೆಗೆದು ಹಾಕುವ ಕ್ರಮವನ್ನು ಖಂಡಿಸಿದರು.
Published on

ಸಂಡೂರು: ನಿವೃತ್ತಿ ಹೆಸರಿನಲ್ಲಿ ಬಡ ಮಹಿಳೆಯರನ್ನು ಸರ್ಕಾರ ಬಿಡುಗಡೆಗೊಳಿಸುತ್ತಿರುವುದನ್ನು ಖಂಡಿಸಿ ಶಾಸಕ ಈ.ತುಕಾರಾಮ್‌ಗೆ ಬಿಸಿಯೂಟ ನೌಕರರು ಸೋಮವಾರ ಮನವಿ ಸಲ್ಲಿಸಿದರು.

ಬಿಸಿಯೂಟ ನೌಕರರ ಸಮಿತಿಯ ತಾಲೂಕು ಅಧ್ಯಕ್ಷೆ ರೇಖಾ ಮಾತನಾಡಿ, ಬಿಸಿಯೂಟ ಯೋಜನೆ ಜಾರಿಯಾದಾಗಿನಿಂದಲೂ ಇಂದಿನವರೆಗೆ ಕಡಿಮೆ ಕೂಲಿಗೆ ದುಡಿಯುತ್ತಿದ್ದೇವೆ. 2600 ರೂ. ಬದಲಾಗಿ 18 ಸಾವಿರ ರೂ.ವೇತನ ಮಂಜೂರು ಮಾಡಬೇಕು ಎಂದು ಒತ್ತಾಯಿಸಿದರು. ಬಿಸಿಯೂಟ ನೌಕರರ ಸಮಿತಿ ತಾಲೂಕು ಕಾರ್ಯದರ್ಶಿ ದಾಕ್ಷಾಯಿಣಿ ಮಾತನಾಡಿ, ನಿವೃತ್ತಿ ಹೆಸರಿನಲ್ಲಿ ಸರ್ಕಾರ ಬಡ ಮಹಿಳೆಯರನ್ನು ಅಮಾನವೀಯವಾಗಿ ಬಿಡುಗಡೆಗೊಳಿಸಲಾಗುತ್ತಿದೆ. ಇದು ಅಮಾನವೀಯವಾಗಿದೆ. ಬಿಡುಗಡೆಗೊಳಿಸುವುದಾದರೆ ನಿವೃತ್ತಿ ವೇತನ ಅಥವಾ ಇಡಗಂಟು ನೀಡಿ ಬಿಡುಗಡೆ ಮಾಡಬೇಕಾಗಿ ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net