ಬಾಕಿ ಕಾಮಗಾರಿ ಬೇಗ ಮುಗಿಸಿ

Published on

ಸಂಡೂರು: ಯರ‌್ರಯ್ಯನಹಳ್ಳಿ, ತಿಮ್ಮಲಾಪುರ, ಎಚ್.ಕೆ.ಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಶೌಚಗೃಹ ನಿರ್ಮಾಣ ಕಾಮಗಾರಿಯನ್ನು ಆದಷ್ಟು ಬೇಗ ಆರಂಭಿಸಿ ಎಂದು ತಾಪಂ ಇಒಗೆ ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರ ಸೂಚಿಸಿದರು.

ತಾಲೂಕಿನ ಆರ್.ಗೊಲ್ಲರಹಟ್ಟಿ, ಗೆಣತಿಕಟ್ಟೆ ಸೇರಿ ವಿವಿಧ ಗ್ರಾಮಗಳಲ್ಲಿ ಶಾಲಾ ಕಾಂಪೌಂಡ್, ವೈಯಕ್ತಿಕ ಕಾಮಗಾರಿ, ಹಿಪ್ಪು ನೇರಳೆ ಹಾಗೂ ಅರಣ್ಯ ಇಲಾಖೆ ಬ್ಯಾಕ್ ಪ್ಲಾಂಟೇನ್ ಕಾಮಗಾರಿಗಳನ್ನು ಬುಧವಾರ ಪರಿಶೀಲಿಸಿ ಮಾತನಾಡಿದರು.

ಬಾಕಿ ಕಾಮಗಾರಿಗಳನ್ನು ತ್ವರಿತವಾಗಿ ಮುಗಿಸಬೇಕು ಎಂದು ಸೂಚಿಸಿದರು. ಹುಚ್ಚೇನಹಳ್ಳಿ, ಎಚ್.ಕೆ.ಹಳ್ಳಿ. ಗ್ರಾಮದ ಶಾಲಾ ಶೌಚಗೃಹ, ಕಾಳಿಂಗೇರಿಯಲ್ಲಿ ಸ.ಹಿ.ಪ್ರಾ.ಶಾಲೆಯ 2 ಕೊಠಡಿಗಳ ನಿರ್ಮಾಣ ಕಾಮಗಾರಿ ಪರಿಶೀಲಿಸಿದರು.

ತಾಪಂ ಇಒ ಎಚ್.ಷಡಕ್ಷರಯ್ಯ, ನರೇಗಾ ಎಡಿ ರೇಣುಕಾಚಾರ್ಯ ಸ್ವಾಮಿ, ಪಿಡಿಒಗಳಾದ ಅಬ್ದುಲ್ ಖಾದರಿ, ಅಗ್ರಹಾರ ನಾಗರಾಜ, ಕಾರ್ಯದರ್ಶಿ ಕರಿಬಸಪ್ಪ, ಸೋವೇನಹಳ್ಳಿ ಕಟ್ಟೆಬಸಪ್ಪ, ಟಿಸಿ ಕೇಶವಮೂರ್ತಿ, ಐಇಸಿ ಸಂಯೋಜಕ ಯಂಕಪ್ಪ ಇತರರಿದ್ದರು.
25-ಸಂಡೂರು-3
ಕಾಳಿಂಗೇರಿಯಲ್ಲಿ ಸ.ಹಿ.ಪ್ರಾ.ಶಾಲೆಯ 2 ಕೊಠಡಿಗಳ ನಿರ್ಮಾಣ ಕಾಮಗಾರಿಯನ್ನು ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರ ವೀಕ್ಷಿಸಿದರು. ತಾಪಂ ಇಒ ಎಚ್.ಷಡಕ್ಷರಯ್ಯ, ನರೇಗಾ ಎಡಿ ರೇಣುಕಾಚಾರ್ಯ ಸ್ವಾಮಿ, ಯಂಕಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net