ಸಂಘಟನೆ ಬಲಪಡಿಸಲು ಒಗ್ಗಟ್ಟಾಗಿ

Sandur Balija Meet
ಸಂಡೂರಿನಲ್ಲಿ ತಾಲೂಕು ಬಲಿಜ ಸಂಘದ ಪದಾಧಿಕಾರಿಗಳ ಸಭೆಯಲ್ಲಿ ಪ್ರಮುಖರಾದ ಎಂಎಲ್‌ಕೆ ನಾಯ್ಡು, ಕುಮಾರಸ್ವಾಮಿ ಬಳೆಗಾರ, ಗೋವಿಂದಪ್ಪ ಭುಜಂಗನಗರ, ದೌಲತ್‌ಪುರ ಹೇಮಣ್ಣ ಪೂಜಾರ್, ಚೋರನೂರು ಶ್ರೀನಿವಾಸ ಪೂಜಾರ್ ಇತರರಿದ್ದರು.
Published on

ಸಂಡೂರು: ಪಟ್ಟಣದ ಸರ್ಕಾರಿ ಪ್ರವಾಸಿ ಮಂದಿರದಲ್ಲಿ ತಾಲೂಕು ಬಲಿಜ ಸಂಘದ ಪದಾಧಿಕಾರಿಗಳ ಸಭೆ ಭಾನುವಾರ ನಡೆಯಿತು.

ಮುಖಂಡ ಎಂಎಲ್‌ಕೆ ನಾಯ್ಡು ಮಾತನಾಡಿ, ಬಲಿಜ ಸಮಾಜವು ಹಿಂದುಳಿದಿದ್ದು, ಜನರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು. ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯ ಪಡೆದು ಮುಖ್ಯವಾಹಿನಿಗೆ ಬರಬೇಕು. ಸಂಘಟನೆ ಬಲಪಡಿಸಲು ಎಲ್ಲರೂ ಒಗ್ಗಟ್ಟಾಗಬೇಕು ಎಂದರು.

ಪದಾಧಿಕಾರಿಗಳ ಆಯ್ಕೆ: ಕುಮಾರಸ್ವಾಮಿ ಬಳೆಗಾರ (ಗೌ.ಅಧ್ಯಕ್ಷ), ಗೋವಿಂದಪ್ಪ ಭುಜಂಗನಗರ (ಅಧ್ಯಕ್ಷ), ದೌಲತ್‌ಪುರ ಹೇಮಣ್ಣ ಪೂಜಾರ್, ಚೋರನೂರು ಶ್ರೀನಿವಾಸ ಪೂಜಾರ್, ಬನ್ನಿಹಟ್ಟಿ ತಿಮ್ಮಪ್ಪ (ಉಪಾಧ್ಯಕ್ಷರು), ಎನ್‌ಟಿಆರ್ ನರಸಿಂಹ (ಕಾರ್ಯದರ್ಶಿ), ದೌಲತ್‌ಪುರ ಜಯಣ್ಣ (ಖಜಾಂಚಿ), ಆರ್.ಗೋಪಾಲಪ್ಪ, ಸರಸ್ವತಿ, ಮಂಜುಳಾ (ಸದಸ್ಯರು), ಎಂಎಲ್‌ಕೆ.ನಾಯ್ಡು, ಜಯರಾಮ್ ಪೂಜಾರ್, ಭುಜಂಗನಗರದ ಚಿನ್ನಾಪುರಪ್ಪ (ಸಲಹೆಗಾರರು), ನಿವೃತ್ತ ಎಎಸ್‌ಐ ಕೃಷ್ಣಪ್ಪ, ಭುಜಂಗನಗರದ ಭೀಮಪ್ಪ, ರಾಜಣ್ಣ (ಸಂಘಟನಾ ಕಾರ್ಯದರ್ಶಿಗಳು) ಆಯ್ಕೆಯಾದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net