ಸೊಳ್ಳೆಗಳ ನಿಯಂತ್ರಣದ ಅರಿವು ಮೂಡಿಸಿ

Sandur Health New
ಸಂಡೂರಿನಲ್ಲಿ ಸೊಳ್ಳೆ ನಿಯಂತ್ರಣ ವಿಧಾನಗಳ ಮಾದರಿಗಳ ಚಿತ್ರಕಲೆ ಪ್ರದರ್ಶನವನ್ನು ಟಿಎಚ್‌ಒ ಡಾ.ಭರತ್ ಕುಮಾರ್ ಗುರುವಾರ ವೀಕ್ಷಿಸಿದರು. ಬಿಆರ್‌ಸಿ ಶರಣ ಬಸಪ್ಪ, ಶಾಲೆಯ ಉಪ ಪ್ರಾಚಾರ್ಯ ಎಚ್.ಎನ್.ಬೋಸ್ಲೆ, ಬಿಆರ್‌ಪಿ ಮಂಜುನಾಥ್ ಇದ್ದರು.
Published on

ಸಂಡೂರು: ಸೊಳ್ಳೆಗಳಿಂದ ಮಲೇರಿಯಾ, ಡೆಂೆ ಸೇರಿದಂತೆ ಆರು ಮಾರಕ ರೋಗಗಳು ಹರಡುತ್ತವೆ ಎಂದು ಟಿಎಚ್‌ಒ ಡಾ.ಭರತ್ ಕುಮಾರ್ ಹೇಳಿದರು.

ವಿಶ್ವ ಸೊಳ್ಳೆ ದಿನಾಚರಣೆ ಅಂಗವಾಗಿ ಪಟ್ಟಣದ ಎಪಿಎಂಸಿ ಪ್ರೌಢಶಾಲೆಯಲ್ಲಿ ಸೊಳ್ಳೆ ನಿಯಂತ್ರಣಾ ವಿಧಾನಗಳ ಮಾದರಿಗಳ ಚಿತ್ರಕಲೆ ಪ್ರದರ್ಶನ ಕಾರ್ಯಕ್ರಮದಲ್ಲಿ ಗುರುವಾರ ಮಾತನಾಡಿದರು.

ರೋಗ ಹರಡದಂತೆ ಸೊಳ್ಳೆಗಳ ನಿಯಂತ್ರಣ ಮಾಡಬೇಕಿದೆ. ಅದಕ್ಕಾಗಿ ಮಕ್ಕಳಿಗೆ ಸೊಳ್ಳೆಗಳ ಸಂತತಿ, ಜೀವನ ಶೈಲಿ ಮತ್ತು ಸೊಳ್ಳೆಗಳ ಉತ್ಪತ್ತಿ ತಡೆಗಟ್ಟುವ ಕುರಿತು ತಿಳಿಸಲು ಚಿತ್ರಕಲೆ ಸ್ಪರ್ಧೆ ಏರ್ಪಡಿಸಲಾಗಿತ್ತು.

ವಿದ್ಯಾರ್ಥಿಗಳು ಸೊಳ್ಳೆಗಳ ನಿಯಂತ್ರಣ ವಿಧಾನಗಳನ್ನು ಉತ್ತಮವಾಗಿ ರಚಿಸಿದ್ದು, ಮನದಲ್ಲಿ ಶಾಶ್ವತವಾಗಿ ಇರುತ್ತದೆ ಎಂದು ತಿಳಿಸಿದರು.

ಬಿಆರ್‌ಸಿ ಶರಣ ಬಸಪ್ಪ, ಶಾಲೆಯ ಉಪ ಪ್ರಾಚಾರ್ಯ ಎಚ್.ಎನ್.ಬೋಸ್ಲೆ, ಬಿಆರ್‌ಪಿ ಮಂಜುನಾಥ್, ಸಂಪನ್ಮೂಲ ವ್ಯಕ್ತಿಯಾದ ತಿಪ್ಪೇಸ್ವಾಮಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net