ಉತ್ತಮ ಹವ್ಯಾಸಗಳನ್ನು ಮೈಗೂಡಿಸಿಕೊಳ್ಳಿ

Sandur Awarness
ತೋರಣಗಲ್ ರೈಲ್ವೆ ನಿಲ್ದಾಣದ ಸಹಿಪ್ರಾ ಶಾಲೆಯಲ್ಲಿ ಏರ್ಪಡಿಸಿದ್ದ ರಸ್ತೆ ಸುರಕ್ಷತಾ ಸಪ್ತಾಹ ಮತ್ತು ಮಾದಕ ದ್ರವ್ಯ ವಿರೋಧಿ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯಪೇದೆ ನೂರ್ ಅಹಮದ್ ಮಾತನಾಡಿದರು. ಸಿಆರ್‌ಪಿ ಯಾಸ್ಮಿನ್ ಜುಂಗಲ್ ನಾಯ್ಕಿ, ಮುಖ್ಯಶಿಕ್ಷಕ ಬಂದೇ ನವಾಜ್, ಸಹ ಶಿಕ್ಷಕರಾದ ರಜನಿ, ಪಾರ್ವತಿ, ನಾಗವೇಣಿ, ಪ್ರಭಾ, ಮಹಾಲಕ್ಷ್ಮೀ, ಷರೀಫ್, ಕವಿತಾ ಇತರರಿದ್ದರು.
Published on

ಸಂಡೂರು: ವಿದ್ಯಾರ್ಥಿಗಳು ರಸ್ತೆ ಸುರಕ್ಷತಾ ಮತ್ತು ಟ್ರಾಫಿಕ್ ಸಿಗ್ನಲ್ ನಿಯಮಗಳ ಬಗ್ಗೆ ತಿಳಿದುಕೊಳ್ಳಬೇಕು ಎಂದು ಮುಖ್ಯಪೇದೆ ನೂರ್ ಅಹಮದ್ ಹೇಳಿದರು.

ತೋರಣಗಲ್ ರೈಲ್ವೆ ನಿಲ್ದಾಣದ ಸರ್ಕಾರಿ ಹಿಪ್ರಾ ಶಾಲೆಯಲ್ಲಿ ಪೋಲಿಸ್ ಇಲಾಖೆ, ಆರೋಗ್ಯ ಇಲಾಖೆ ಮತ್ತು ಜೆಎಸ್‌ಡಬ್ಲುೃ ಫೌಂಡೇಷನ್‌ನ ಆಸ್ಪೈರ್ ಸಂಸ್ಥೆಯ ಸಹಯೋಗದಲ್ಲಿ ಏರ್ಪಡಿಸಿದ್ದ ರಸ್ತೆ ಸುರಕ್ಷತಾ ಸಪ್ತಾಹ ಮತ್ತು ಮಾದಕ ದ್ರವ್ಯ ವಿರೋಧಿ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ವಿದ್ಯಾರ್ಥಿಗಳು ರಸ್ತೆ ದಾಟುವಾಗ ಸುರಕ್ಷತಾ ಕ್ರಮ ಅನುಸರಿಸಬೇಕು. ದುಶ್ಚಟಗಳಿಗೆ ದಾಸರಾದರೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದ್ದು, ಉತ್ತಮ ಹವ್ಯಾಸಗಳನ್ನು ಕೈಗೊಳ್ಳಬೇಕು ಎಂದರು.

ಸಿಆರ್‌ಪಿ ಯಾಸ್ಮಿನ್ ಜುಂಗಲ್ ನಾಯ್ಕಿ ಮಾತನಾಡಿ ಮಕ್ಕಳು ವಿದ್ಯಾಭ್ಯಾಸ ಮತ್ತು ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸುವಂತೆ ಕಿವಿ ಮಾತು ಹೇಳಿದರು. ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ, ಮುಖ್ಯಶಿಕ್ಷಕ ಬಂದೇ ನವಾಜ್ ಮಾತನಾಡಿದರು. ಸಹ ಶಿಕ್ಷಕರಾದ ರಜನಿ, ಪಾರ್ವತಿ, ನಾಗವೇಣಿ, ಪ್ರಭಾ, ಮಹಾಲಕ್ಷ್ಮೀ, ಷರೀಫ್, ಕವಿತಾ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net