ಕಂಪ್ಯೂಟರ್ ಜ್ಞಾನ ತುಂಬಾ ಅಗತ್ಯ- ವಿದ್ಯಾರ್ಥಿಗಳಿಗೆ ಬಿಕೆಜಿ ಫೌಂಡೇಷನ್‌ನ ಜಿಎಂ ಶ್ರೀನಿವಾಸರಾವ್ ಕಿವಿಮಾತು

051222 Sanduru Free Computer Tally Training Camp
ಸಂಡೂರಿನ ಆಶ್ರಯ ಕಾಲನಿಯಲ್ಲಿರುವ ವಿ.ಟಿ.ಸೆಂಟರ್‌ನಲ್ಲಿ ಬಿಕೆಜಿ ಫೌಂಡೇಷನ್ ಸೋಮವಾರ ಹಮ್ಮಿಕೊಂಡಿದ್ದ ಒಂದು ತಿಂಗಳ ಉಚಿತ ಕಂಪ್ಯೂಟರ್ ಟ್ಯಾಲಿ ತರಬೇತಿ ಶಿಬಿರದಲ್ಲಿ ವಿದ್ಯಾರ್ಥಿಗಳೊಂದಿಗೆ ಬಿಕೆಜಿ ಫೌಂಡೇಷನ್ ಫೌಂಡೇಷನ್ ಮುಖ್ಯಸ್ಥ ಬಿ.ನಾಗನಗೌಡ, ಜಿಎಂ ಶ್ರೀನಿವಾಸರಾವ್, ತರಬೇತಿದಾರರು ಇದ್ದರು.
Published on

ಸಂಡೂರು: ಯಾವುದೇ ರೀತಿಯ ವಿದ್ಯಾಭ್ಯಾಸ ಮಾಡಿದರೂ ಪರವಾಗಿಲ್ಲ, ಆಯಾ ಶಿಕ್ಷಣಕ್ಕೆ ತಕ್ಕಂತೆ ಕಂಪ್ಯೂಟರ್ ಜ್ಞಾನ ಹೊಂದುವುದು ತುಂಬಾ ಅಗತ್ಯ ಎಂದು ಬಿಕೆಜಿ ಫೌಂಡೇಷನ್‌ನ ಜಿಎಂ ಶ್ರೀನಿವಾಸರಾವ್ ಹೇಳಿದರು.

ಪಟ್ಟಣದ ಆಶ್ರಯ ಕಾಲನಿಯಲ್ಲಿರುವ ವಿ.ಟಿ.ಸೆಂಟರ್‌ನಲ್ಲಿ ಬಿಕೆಜಿ ಫೌಂಡೇಷನ್ ಹಮ್ಮಿಕೊಂಡಿದ್ದ ಒಂದು ತಿಂಗಳ ಉಚಿತ ಕಂಪ್ಯೂಟರ್ ಟ್ಯಾಲಿ ತರಬೇತಿ ಶಿಬಿರದಲ್ಲಿ ಸೋಮವಾರ ಮಾತನಾಡಿದರು. ಇಂದಿನ ಮಕ್ಕಳು ತಮಗರಿಯದ ವಿಷಯವನ್ನು ಕೇಳಿ ತಿಳಿದುಕೊಳ್ಳಲು ಹಿಂಜರಿಯುತ್ತಾರೆ. ದಕ್ಕಾಗಿ ಸ್ಕಿಲ್ ಡೆವೆಲೆಪ್‌ಮೆಂಟ್ ಪ್ರೋಗ್ರಾಮ್‌ಗಳನ್ನು ಆಯೋಜಿಸಲಾಗುತ್ತದೆ. ಇವುಗಳಿಂದ ಮಾಹಿತಿ ತಿಳಿದುಕೊಳ್ಳಬೇಕು. ಸಂಡೂರು ಶಾಸಕ ಈ.ತುಕಾರಾಮ್ ಸಹ ನಂದಿಹಳ್ಳಿ ಸ್ನಾತಕೊತ್ತರ ಕೇಂದ್ರದಲ್ಲಿ ಮೈನಿಂಗ್ ಸಂಬಂಧಿಸಿದ ತರಗತಿ ಆರಂಭಿಸಲು ಒತ್ತಾಯಿಸುತ್ತಿದ್ದಾರೆ. ಅದು ಸಹ ಜೂನ್‌ನಲ್ಲಿ ಆರಂಭವಾಗುವ ಸಾಧ್ಯತೆಯಿದೆ ಇದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಬಿಕೆಜಿ ಫೌಂಡೇಷನ್ ಮುಖ್ಯಸ್ಥ ಬಿ.ನಾಗನಗೌಡ ಮಾತನಾಡಿ, ಬಾಷೆ ಸಂಪರ್ಕ ಮಾಧ್ಯಮವಾಗಿದ್ದು, ಕಂಪ್ಯೂಟರ್ ಕಲಿಯಲು ಇಂಗ್ಲಿಷ್ ಬೇಕೆಬೇಕು. ಸಂಕೋಚ, ನಾಚಿಕೆ ಪಡದೆ ಇತರರು ಹೇಳಿದ್ದನ್ನು ಅರ್ಥ ಮಾಡಿಕೊಳ್ಳಬೇಕು. ಯಾವ ಮಕ್ಕಳು ಗುರು-ಹಿರಿಯರಿಗೆ ಗೌರವ ಕೋಡುತ್ತಾರೊ ಕಲಿಕಾ ಸ್ಥಳವನ್ನು ದೇವಾಲಯ ಎಂದು ಬಾವಿಸುತ್ತಾರೊ ಅವರಿಗೆ ಶೀಘ್ರ ವಿದ್ಯೆ ತಲೆಗೆ ಹತ್ತುತ್ತದೆ ಎಂದರು.

ಎಂ.ನೇತ್ರಾ ಮಾತನಾಡಿ, ನನ್ನ ತಾಯಿ ಕೂಲಿ ಕೆಲಸ ಮಾಡಿ ನನಗೆ ಪದವಿ ಓದಿಸಿದ್ದಳು. ಆದರೆ, ನಾನು ಕಂಪ್ಯೂಟರ್ ಟ್ಯಾಲಿ ಕಲಿಯದಿದ್ದಕ್ಕೆ ನನಗೆ ಉದ್ಯೋಗ ಸಿಗುತ್ತಿಲ್ಲ. ಅದಕ್ಕಾಗಿ ಇಲ್ಲಿ ಸೇರಿದ್ದೇನೆ ಎಂದರು. ತರಬೇತುದಾರ ದೇವ್, ಎಚ್‌ಆರ್‌ನ ಜಿಎಂ ರಾಜಶೇಖರ್ ಬೆಲ್ಲದ್ ಮಾತನಾಡಿದರು. ಪ್ರಮುಖರಾಧ ಬಷೀರ್, ಎ.ಕುಮಾರಸ್ವಾಮಿ, ಬಿಕೆಜಿ ಎಚ್‌ಆರ್‌ನ ಸಂದೀಪ್ ಕುಮಾರ್, ಗೋಪಾಲ್, ಹನುಮೇಶ್ ಮತ್ತು ವಿದ್ಯಾರ್ಥಿಗಳಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net