ಕುಸಿಯುತ್ತಿವೆ ನೈತಿಕ ಮೌಲ್ಯಗಳು

snd-1
ಸಂಡೂರು ಸಪ್ರದ ಕಾಲೇಜಿನಲ್ಲಿ ‘ಸಂಡೂರು ಪ್ರದೇಶದ ಇತಿಹಾಸ’ ಪುಸ್ತಕವನ್ನು ಸಿಡಿಸಿ ಸದಸ್ಯ ಸಿ.ಎಂ.ಶಿಗ್ಗಾಂವಿ ಬಿಡುಗಡೆ ಮಾಡಿದರು. ಪ್ರಾಚಾರ್ಯ ಡಾ.ಎಚ್.ಬಸವರಾಜ, ವಿಎಸ್‌ಕೆ ವಿವಿ ಇತಿಹಾಸ ವಿಭಾಗದ ಮುಖ್ಯಸ್ಥ ಡಾ.ತಿಪ್ಪೇಸ್ವಾಮಿ, ಪುಸ್ತಕ ಕತೃ ತಳವಾರ ನರಸಿಂಹ, ಪ್ರಮುಖರಾದ ಚೈತನ್ಯಾ ತುಕಾರಾಮ್,ವಕೀಲೆ ಜಿ.ಕೆ.ರೇಖಾ ಇತರರಿದ್ದರು.
Published on

ಸಂಡೂರು: ಸಂಡೂರು ಪ್ರದೇಶದ ಇತಿಹಾಸ ದರ್ಶನ ಪುಸ್ತಕ ಇಲ್ಲಿನ ಐತಿಹ್ಯಕ್ಕೆ ಕೈಗನ್ನಡಿಯಂತಿದೆ ಎಂದು ವಿಎಸ್‌ಕೆ ವಿವಿ ಇತಿಹಾಸ ವಿಭಾಗದ ಮುಖ್ಯಸ್ಥ ಡಾ.ತಿಪ್ಪೇಸ್ವಾಮಿ ಹೇಳಿದರು.

ಪಟ್ಟಣದ ಸಪ್ರದ ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ್ದ ಅಂತಿಮ ವರ್ಷದ ಬೀಳ್ಕೊಡುಗೆ ಹಾಗೂ ‘ಸಂಡೂರು ಪ್ರದೇಶದ ಇತಿಹಾಸ’ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಇಂದು ಮನುಷ್ಯ ಹಣದ ಹಿಂದೆ ಬಿದ್ದಿರುವ ಪರಿಣಾಮ ನೈತಿಕ ಮೌಲ್ಯಗಳು ಕುಸಿಯುತ್ತಿವೆ. ಇಂಥಹ ಸಂದರ್ಭದಲ್ಲಿ ಈ ಭಾಗದ ಇತಿಹಾಸದ ಬಗ್ಗೆ ಪುಸ್ತಕ ರಚಿಸಿ, ಜನರಿಗೆ ತಿಳಿಸುವ ಕಾರ್ಯವನ್ನು ತಳವಾರ ನರಸಿಂಹ ಅವರು ಮಾಡಿರುವುದು ಶ್ಲಾಘನೀಯ ಎಂದರು.

ಪುಸ್ತಕ ಬಿಡುಗಡೆಗೊಳಿಸಿದ ಸಿಡಿಸಿ ಸದಸ್ಯ ಸಿ.ಎಂ.ಶಿಗ್ಗಾಂವಿ ಮಾತನಾಡಿ, ಇಂದು ಓದುವ ಆಸಕ್ತಿ ಜನರಲ್ಲಿ ಕಡಿಮೆಯಾಗುತ್ತಿದೆ. ಇಂದಿನ ಯುವಕರು ಮೊಬೈಲ್‌ಗಳ ದಾಸರಾಗಿದ್ದಾರೆ. ಪಠ್ಯಗಳಲ್ಲಿರುವುದನ್ನು ಓದಿದರೆ ಸಾಕಾಗುತ್ತದೆಂಬ ಮನೋಭಾವ ಬಿಡಬೇಕು. ಕವಿ, ಸಾಹಿತಿಗಳ ಪುಸ್ತಕ ಓದುವುದನ್ನು ರೂಢಿಸಿಕೊಳ್ಳಬೇಕೆಂದು.

ಕನ್ನಡ ಉಪನ್ಯಾಸಕ ಡಾ.ಕೆ.ತಿಪ್ಪೇರುದ್ರಪ್ಪ ಮಾತನಾಡಿ, ಸಂಡೂರು ಇತಿಹಾಸವನ್ನು ತಳವಾರ ನರಸಿಂಹ ಅವರು ಪುಸ್ತಕದ ಮೂಲಕ ಜನರಿಗೆ ತಿಳಿಸುವ ಕೆಲಸ ಮಾಡಿದ್ದಾರೆ ಎಂದರು.

ಪ್ರಾಂಶುಪಾಲ ಡಾ.ಎಚ್.ಬಸವರಾಜ ಮಾತನಾಡಿದರು. ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಮಲ್ಲಿಕಾರ್ಜುನ, ವೀರೇಶ, ರೇಖಾ, ಸಾಂಸ್ಕೃತಿಕ ಸಮಿತಿ ಸಂಚಾಲಕ ಶಂಕರೇಗೌಡ, ಜಿ.ವೀರೇಶ, ಟಿ.ಶ್ರೀನಿವಾಸ, ಜಿ.ಆನಂದ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net