ಸಂಡೂರು: ಕರೋನ ಬಗ್ಗೆ ಭಯ ಪಡದೇ ಎಚ್ಚರವಹಿಸಬೇಕಿದ್ದು, ಕೈಗಳಿಗೆ ಸ್ಯಾನಿಟೈಜರ್ ಬಳಸಿ ಇತರರಿಂದ ಅಂತರ ಕಾಪಾಡಿಕೊಳ್ಳುಬೇಕು ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಹೇಳಿದರು
.
ತಾಲೂಕಿನ ಕುರೇಕುಪ್ಪ ಗ್ರಾಮದ ಶ್ರೀ ಆಂಜನೇಯ ದೇವಸ್ಥಾನದ ಆವರಣದಲ್ಲಿ ಸಾರ್ವಜನಿಕರಿಗೆ ರೂಪಾಂತರಿ ಕರೋನಾ ವೈರಸ್ ಕುರಿತು ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.ನೆಗಡಿ, ಕೆಮ್ಮು ಲಕ್ಷಣಗಳು ಕಂಡುಬಂದರೆ ವೈದ್ಯರ ಬಳಿ ತಪಾಸಣೆ ಮಾಡಿಸಬೇಕು.ವೈದ್ಯರ ಸಲಹೆ ಮೇರೆಗೆ ಕೋವಿಡ್ ಪರೀಕ್ಷೆಗೆ ಒಳಗಾಗಬೇಕು.ಅನವಶ್ಯಕವಾಗಿ ಗುಂಪು ಸೇರದೇ ಆರೋಗ್ಯದ ಕಡೆಗೆ ಕಾಲಜಿವಹಿಸಬೇಕು ಎಂದರು. ಗ್ರಾಮಸ್ಥರಾದ ಜಡೆಪ್ಪ, ನಾಗಭೂಷಪ್ಪ, ಸ್ವಾಮಿ, ನಾಗರಾಜ, ಪರಸಪ್ಪ, ಆಶಾ ಕಾರ್ಯಕರ್ತೆಯರಾದ ಬಸಮ್ಮ, ನೀಲಮ್ಮ ಇತರರಿದ್ದರು.