ಗ್ರಾಮೀಣ ಪ್ರದೇಶಕ್ಕೂ ವ್ಯಾಪಿಸುತ್ತಿದೆ ವೈರಸ್

23012022 Sandur corona test
Published on

ಸಂಡೂರು: ಕರೊನಾ ಹಾಟ್‌ಸ್ಪಾಟ್ ಆಗಿರುವ ತಾಲೂಕಿನ ಕೈಗಾರಿಕಾ ಪ್ರದೇಶಕ್ಕೆ ಸೀಮಿತವಾಗಿದ್ದ ಕರೊನಾ ಪ್ರಕರಣಗಳು ಇದೀಗ ಸಂಡೂರು ಪಟ್ಟಣ ಸೇರಿ ಗ್ರಾಮೀಣ ಪ್ರದೇಶಕ್ಕೂ ವ್ಯಾಪಿಸುತ್ತಿದೆ.

ಜ.1ರಿಂದ 21ರವರೆಗೆ ತಾಲೂಕಾದ್ಯಂತ 1003 ಸೋಂಕು ಪ್ರಕರಣಗಳು ಕಾಣಿಸಿದ್ದರೆ, ಇದರಲ್ಲಿ ತೋರಣಗಲ್ ಕೈಗಾರಿಕಾ ಪ್ರದೇಶವೊಂದರಲ್ಲೇ 850ಕ್ಕೂ ಅಧಿಕ ಪ್ರಕರಣ ದೃಢಪಟ್ಟಿವೆ. ನಂದಿಹಳ್ಳಿ ಸ್ನಾತಕೋತ್ತರ ಕೇಂದ್ರದ 34 ವಿದ್ಯಾರ್ಥಿಗಳಿಗೆ ಭಾನುವಾರ ಸೋಂಕು ಕಾಣಿಸಿಕೊಂಡಿದೆ. 10ದಿನಗಳಲ್ಲಿ ತೋರಣಗಲ್ ಬಸವೇಶ್ವರ ಗ್ರಾಮಾಂತರ ಪ್ರೌಢಶಾಲೆ ಒಬ್ಬ ಸಿಬ್ಬಂದಿ ಹಾಗೂ 30ವಿದ್ಯಾರ್ಥಿಗಳು, ಸರ್ಕಾರಿ ಪ್ರೌಢಶಾಲೆ 6, ದರೋಜಿ ಸಪ್ರೌಶಾ, ಬಿಸಿಎಂ ವಿದ್ಯಾರ್ಥಿ ನಿಲಯ ಸೇರಿ ಈ ವರೆಗೆ ತಾಲೂಕಿನ 100ಕ್ಕೂ ಹೆಚ್ಚು ವಿದ್ಯಾರ್ಥಿಗಳಲ್ಲಿ ಸೋಂಕು ಪತ್ತೆಯಾಗಿದೆ.

ಅಕ್ಟೋಬರ್‌ನಿಂದ ಡಿಸೆಂಬರ್‌ವರೆಗೆ ತೋರಣಗಲ್ ಪ್ರದೇಶದಲ್ಲಿ ಜ.15ರಿಂದ ಒಂದು ವಾರದ ಅವಧಿಯಲ್ಲಿ 750ಕ್ಕೂ ಹೆಚ್ಚು ಪ್ರಕರಣಗಳು ಕಾಣಿಸಿಕೊಂಡಿವೆ. ಹೊರಗಿನಿಂದ ಬಂದ 150ಕ್ಕೂ ಅಧಿಕ ಕಾರ್ಮಿಕರಲ್ಲಿ ಕೋವಿಡ್ ದೃಢಪಟ್ಟಿದೆ. ಬಹುತೇಕ ಸೋಂಕಿತರಿಗೆ ಅವರವರ ಮನೆಗಳಲ್ಲೇ ಐಸೋಲೇಷನ್ ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net