ಗಾಳಿಗೆ ಹಾರಿ ಹೋದ ತಗಡಿನ ಶೀಟ್‌ಗಳು

sandur rain
ಗಾಳಿ-ಮಳೆಗೆ ಸಂಡೂರಿನ ತಾಲೂಕು ಕ್ರೀಡಾಂಗಣ ಛಾವಣಿಯ ತಗಡಿನ ಶೀಟ್‌ಗಳು ಹಾರಿ ಹೋಗಿರುವುದು.
Published on

ಸಂಡೂರು: ಪಟ್ಟಣ ಸೇರಿ ತಾಲೂಕಿನ ವಿವಿಧೆಡೆ ಗುರುವಾರ ರಾತ್ರಿ ಉತ್ತಮ ಮಳೆಯಾಗಿದೆ. ಗಾಳಿ ಮಳೆಗೆ ತಾಲೂಕು ಕ್ರೀಡಾಂಗಣದಲ್ಲಿ ಛಾವಣಿಗೆ ಹಾಕಿದ್ದ ತಗಡಿನ ಶೀಟ್‌ಗಳು ಹಾರಿಹೋಗಿವೆ.

ತೋರಣಗಲ್ ಹೋಬಳಿ ಕುರೇಕುಪ್ಪದಲ್ಲಿ ಮರಗಳು ಉರುಳಿ ಬಿದ್ದಿವೆ. ಯಶವಂತನಗರ ಸಮೀಪದ ರಾಘಾಪುರ ತೋಟದಲ್ಲಿ ಮಾವು, ನೆರಳಿನ ಪರದೆ ಮೇಲೆ ತೆಂಗಿನ ಮರ ಬಿದ್ದು ಹಾನಿಯಾಗಿದೆ. ಅಲ್ಲದೆ ಮೂರು ವಿದ್ಯುತ್ ಕಂಬಗಳು ಬಿದ್ದಿವೆ. ಯಶವಂತನಗರದಲ್ಲಿ ಬಾಳೆ ಬೆಳೆ ನಾಶವಾಗಿದೆ. ಸಂಡೂರು ಹೋಬಳಿ ಯಲ್ಲಿ 17.4 ಮಿಮೀ, ತೋರಣಗಲ್ (ಕುರೇಕುಪ್ಪ) 8 ಮಿಮೀ ಮಳೆಯಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net