

ಸಂಡೂರು: ಪಶ್ಚಿಮಘಟ್ಟಗಳ ವೈಶಿಷ್ಟೃತೆ ಹೋಲುವ ವೈವಿಧ್ಯಮಯವಾದ ಅಪರೂಪದ ವನ್ಯಜೀವಿ ಸಂಕುಲ, ಔಷಧೀಯ ಗಿಡಮೂಲಿಕೆ ತಾಣ ಸಂಡೂರು ಎಂದು ತುಮಕೂರಿನ ತರಬೇತುದಾರ ಜ್ಞಾನ ಸಿಂಧುಸ್ವಾಮಿ ಹೇಳಿದರು.
ಪಟ್ಟಣದ ವೀರಶೈವ ಕಲ್ಯಾಣ ಮಂಟಪದಲ್ಲಿ ಜು.29ರಂದು ಬಳ್ಳಾರಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಅಹಿಂಸಾತ್ಮಕ ನೇರಕ್ರಿಯೆ ಜಾಗೃತಿ ರೇಖೆ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ಸತ್ಯಾಗ್ರಹಿಗಳಿಗೆ ಮತ್ತು ಬೆಂಬಲಿಗರಿಗೆ, ಸ್ವಯಂಸೇವಕರಿಗೆ ತರಬೇತಿ ಕಾರ್ಯಕ್ರಮದಲ್ಲಿ ಶುಕ್ರವಾರ ನೀಡಿದರು.
ಸ್ವಾಮಿಮಲೈನ ಕುಮಾರಸ್ವಾಮಿ ಬೆಟ್ಟದಲ್ಲಿನ ದೇವದಾರಿ ಪ್ರದೇಶದಲ್ಲಿ ಕುದುರೆಮುಖ ಗಣಿ ಕಂಪನಿಗೆ 1ಲಕ್ಷ ಮರಗಳನ್ನ ಕಡಿದು ಗಣಿಗಾರಿಕೆ ಮಾಡಲು ಅವಕಾಶ ಕಲ್ಪಿಸಲಾಗುತ್ತಿದೆ. ಅಲ್ಲದೆ ರಾಮಮನಲೈ ಅರಣ್ಯ ಪ್ರದೇಶದ ರಮಣದುರ್ಗದ ಭಾಗದಲ್ಲಿ ಉಕ್ಕು ಸಚಿವಾಲಯ ಒಡೆತನದ ವಿಶ್ವೇಶ್ವರಯ್ಯ ಉಕ್ಕು ಮತ್ತು ಕಬ್ಬಿಣ ಸಂಸ್ಥೆಗೆ 30 ಸಾವಿರ ಮರಗಳ ಕಡಿಯಲು ಉದ್ದೇಶ ಹೊಂದಲಾಗಿದೆ. ಈ ಗಣಿಗಾರಿಕೆಗಳಿಗಾಗಿ ಅಭಿಪ್ರಾಯ ಸಂಗ್ರಹಿಸಲು ಆ.2 ರಂದು ಸಾರ್ವಜನಿಕರ ಪರಿಸರ ಆಲಿಕೆ ಸಭೆ ಆಯೋಜಿಸಲಾಗಿದೆ. ಇದನ್ನು ವಿರೋಧಿಸಿ ಹಾಗೂ ಸಂಡೂರಿನ ನೈಸರ್ಗಿಕ ಅರಣ್ಯದಲ್ಲಿ ಹೊಸದಾಗಿ ಗಣಿಗಾರಿಕೆಗೆ ಅವಕಾಶ ನೀಡಬಾರದು ಎಂದು ಒತ್ತಾಯಿಸಿದರು.
ಪ್ರಮುಖರಾದ ತಾರಕೇಶ್, ಕಾಶಪ್ಪ, ಈರಣ್ಣ, ಪರಮೇಶಿ, ಬಸವರಾಜ, ಮಲ್ಲಿಕಾರ್ಜುನ, ಸುಬ್ರಹ್ಮಣ್ಯ, ಈರಪ್ಪ, ಮುಕ್ಕುಡೆಪ್ಪ ಇತರರಿದ್ದರು.