ಕಂಪನಿಗಳಿಗೆ ನೇರ ಕೃಷಿ ಉತ್ಪನ್ನಗಳ ಮಾರಾಟ

Sandur Agricultural Produce
ತೋರಣಗಲ್‌ನಲ್ಲಿ ಗುರುವಾರ ಏರ್ಪಡಿಸಿದ್ದ ಖರೀದಿದಾರರು ಮತ್ತು ಮಾರಾಟಗಾರರ ಸಭೆ ಉದ್ಘಾಟನೆ ಸಂದರ್ಭ ಎಡಿಎ ಮಂಜುನಾಥರೆಡ್ಡಿ, ಕೃಷಿ ವಿಭಾಗದ ಸಂಯೋಜಕ ನಾಗನಗೌಡ, ಇಕೋವಾ ಸಂಸ್ಥೆಯ ಗೋಪಾಲ್ ಹೆಗಡೆ ಇತರರಿದ್ದರು.
Published on

ಸಂಡೂರು: ರೈತ ಉತ್ಪಾದಕ ಕಂಪನಿಗಳಿಂದ ಕಡಿಮೆ ದರದಲ್ಲಿ ಬೀಜ-ಗೊಬ್ಬರ ಮತ್ತು ಮಾರ್ಗದರ್ಶನ ಸಿಗುತ್ತಿದೆ. ಖರೀದಿದಾರರು ಮತ್ತು ಮಾರಾಟಗಾರರ ಸಭೆ ಮೂಲಕ ಬೆಳೆಗಳಿಗೆ ಮಾರುಕಟ್ಟೆ ಸಂಪರ್ಕ ಕಲ್ಪಿಸುವುದು ಉತ್ತಮ ಪ್ರಯತ್ನ ಎಂದು ಕೃಷಿ ಇಲಾಖೆ ಎಡಿಎ ಮಂಜುನಾಥರೆಡ್ಡಿ ಹೇಳಿದರು.

ಕೃಷಿ ಇಲಾಖೆ, ಜೆಎಸ್‌ಡಬ್ಲುೃ ಫೌಂಡೇಷನ್, ಇಕೋವಾ ಸಂಪನ್ಮೂಲ ಸಂಸ್ಥೆ ಸಹಯೋಗದಲ್ಲಿ ಗುರುವಾರ ತೋರಣಗಲ್ ಒಪಿಜೆ ಕೇಂದ್ರದಲ್ಲಿ ಆಯೋಜಿಸಿದ್ದ ರೈತ ಉತ್ಪಾದಕ ಕಂಪನಿಗಳಿಗೆ ಖರೀದಿದಾರರು ಮತ್ತು ಮಾರಾಟಗಾರ ಸಭೆಯಲ್ಲಿ ಮಾತನಾಡಿದರು. ಮಧ್ಯವರ್ತಿಗಳ ಹಾವಳಿಯಿಲ್ಲದೆ ನೇರ ಕಂಪನಿಗಳಿಗೆ ಮಾರಾಟ ಮಾಡುವ ಮೂಲಕ ರೈತರು ಹೆಚ್ಚಿನ ಆದಾಯ ಗಳಿಸಬೇಕೆಂಬುದು ಕಾರ್ಯಕ್ರಮದ ಉದ್ದೇಶ. ಈ ಭಾಗದಲ್ಲೂ ಹೆಚ್ಚು ಮೆಕ್ಕೆಜೋಳ ಬೆಳೆಯಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಮೌಲ್ಯವರ್ಧನೆ ಮಾಡುವುದಕ್ಕೆ ಕೃಷಿ ಇಲಾಖೆ ಅಗತ್ಯ ನೆರವು ನೀಡಲಿದೆ ಎಂದು ತಿಳಿಸಿದರು.

ಫೌಂಡೇಷನ್ ಸಿಎಸ್‌ಆರ್ ಮುಖ್ಯಸ್ಥ ಪೆದ್ದಣ್ಣ ಬೀಡಲಾ ಮಾತನಾಡಿ, ಜೆಎಸ್‌ಡಬ್ಲುೃ ಇದುವರೆಗೆ 21 ರೈತ ಉತ್ಪಾದಕ ಕಂಪನಿಗಳನ್ನು ರಚನೆ ಮಾಡಿದೆ. 35 ಸಾವಿರ ರೈತರು ಅನುಕೂಲ ಪಡೆದಿದ್ದಾರೆ. ಮುಂದೆಯೂ ಮಾರುಕಟ್ಟೆ ಸಂಪರ್ಕಕ್ಕೆ ಅನುಕೂಲ ಮಾಡಿಕೊಡಲಾಗುವುದು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ 11 ರೈತ ಉತ್ಪಾದಕ ಕಂಪನಿಗಳ 95ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸಿದ್ದರು. ಕಾರ್ಗಿಲ್ ಇಂಡಿಯಾ, ಬಿಗ್‌ಹ್ಯಾಟ್, ಎಸ್‌ಎಲ್‌ಡಿ, ನಿಂಜಾ ಕಾರ್ಟ್ ಮತ್ತು 25ಕ್ಕೂ ಹೆಚ್ಚು ಕಂಪನಿಗಳು ಮತ್ತು ರೈತ ಉತ್ಪಾದಕ ಕಂಪನಿಗಳು ಚರ್ಚಿಸಿ ಮಾರುಕಟ್ಟೆ ವ್ಯವಸ್ಥೆಗೆ ಒಪ್ಪಂದ ಮಾಡಿಕೊಳ್ಳಲಾಯಿತು. ಫೌಂಡೇಷನ್ ಕೃಷಿ ವಿಭಾಗದ ಸಂಯೋಜಕ ನಾಗನಗೌಡ, ಇಕೋವಾ ಸಂಸ್ಥೆಯ ಗೋಪಾಲ್ ಹೆಗಡೆ, ರಾಜ, ಈವೈ ಸಂಸ್ಥೆ ಅಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net