ಮೂವರು ಬಾಲ ಕಾರ್ಮಿಕರ ರಕ್ಷಣೆ

Published on

ಸಂಡೂರು: ತಾಲೂಕಿನ ತೋರಣಗಲ್‌ನ ಕುರೇಕುಪ್ಪ ಪುರಸಭೆ ವ್ಯಾಪ್ತಿಯ ಟೀಸ್ಟಾಲ್, ಹಾರ್ಡ್‌ವೇರ್ ಶಾಪ್, ಗ್ಯಾರೇಜ್‌ನಲ್ಲಿ ಕೆಲಸ ಮಾಡುತ್ತಿದ್ದ ಮೂವರ ಬಾಲಕಾರ್ಮಿಕ ಮಕ್ಕಳನ್ನು ಅಧಿಕಾರಿಗಳು ಸೋಮವಾರ ರಕ್ಷಿಸಿದರು. ನಂತರ 50 ಕೆಜಿ ಪ್ಲಾಸ್ಟಿಕ್ ವಸ್ತುಗಳನ್ನು ವಶಕ್ಕೆ ಪಡೆದು ಅಂಗಡಿ ಮಾಲೀಕರಿಗೆ ದಂಡ ವಿಧಿಸಿದರು. ತಂಬಾಕು ನಿಯಂತ್ರಣ ಕುರಿತು ಜಾಗೃತಿ ಮೂಡಿಸಿದರು.

ತಹಸೀಲ್ದಾರ್ ಅನಿಲ್ ಕುಮಾರ್ ಮಾತನಾಡಿ, ಸರ್ಕಾರ ಪ್ಲಾಸ್ಟಿಕ್ ವಸ್ತುಗಳ ಮಾರಾಟ ನಿಷೇಧಿಸಿದೆ. ತಂಬಾಕು ಉತ್ಪನ್ನಗಳ ಬಳಕೆಯನ್ನು 18 ವರ್ಷದ ಒಳಗಿನವರಿಗೆ ಮಾರಾಟ ಮಾಡುವಂತಿಲ್ಲ. ಅಂಗಡಿ, ಹೋಟೆಲ್ ನಾಮಫಲಕಗಳ ಮೇಲೆ ಕಡ್ಡಾಯವಾಗಿ ಕನ್ನಡ ಬರಹದ ನಾಮಫಲಕಗಳಿರಬೇಕು ತಪ್ಪಿದಲ್ಲಿ ದಂಡ ವಿಧಿಸಲಾಗುವುದು ಎಚ್ಚರಿಸಿದರು.

ಜಿಲ್ಲಾ ಮಕ್ಕಳ ಘಟಕ ರಕ್ಷಣಾಧಿಕಾರಿ ಮೌನೇಶ್, ಪುರಸಭೆ ಮುಖ್ಯಾಧಿಕಾರಿ ಸತೀಶ್ ಗುಡ್ಡೆ, ತೋರಣಗಲ್ ಗ್ರಾಪಂ ಪಿಡಿಒ ಸಿದ್ದಲಿಂಗಯ್ಯ, ಎಸ್‌ಡಿಎ ಹೊನ್ನೂರಸ್ವಾಮಿ, ಅಂಜಿನಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net