ಜಿಂದಾಲ್‌ಗೆ ಸರ್ಕಾರ ಭೂಮಿ ಪರಭಾರೆ ಮಾಡಲಿ: ಸಂಡೂರು ಶಾಸಕ ಇ.ತುಕಾರಾಮ್ ಒತ್ತಾಯ

E Tukaram 6x4 Web
Published on

ಸಂಡೂರು: ಈ ಹಿಂದಿನ ಒಪ್ಪಂದದಂತೆ ಜಿಂದಾಲ್‌ಗೆ 3667 ಎಕರೆ ಭೂಮಿಯನ್ನು ಪರಭಾರೆ ಮಾಡಬೇಕು ಎಂದು ಶಾಸಕ ಇ.ತುಕಾರಾಮ್ ಸರ್ಕಾರವನ್ನು ಒತ್ತಾಯಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. 1971ರಲ್ಲಿ ತೋರಣಗಲ್ ಭಾಗದಲ್ಲಿ ವಿಜಯನಗರ ಉಕ್ಕಿನ ಕಾರ್ಖಾನೆ ಸ್ಥಾಪನೆಗೆ ಇಂಡಿಯನ್ ಸ್ಟೀಲ್ ಅಥಾರಿಟಿ ಹೆಸರಲ್ಲಿ 10 ಸಾವಿರ ಎಕರೆ ಭೂಸ್ವಾಧೀನ ಪಡಿಸಿಕೊಳ್ಳಲಾಯಿತು.

ನಂತರ ಮಾಜಿ ಪ್ರಧಾನಿ ದಿ.ಇಂದಿರಾಗಾಂಧಿ ಶಂಕು ಸ್ಥಾಪನೆ ಮಾಡಿದರೂ ಕಾರ್ಖಾನೆ ಆರಂಭಗೊಳ್ಳಲಿಲ್ಲ. ವಿಜಯನಗರ ಉಕ್ಕು ನಮ್ಮ ಹಕ್ಕು ಎಂದು ಮಾಜಿ ಶಾಸಕ ದಿ.ಯು.ಭೂಪತಿ ಸೇರಿ ಸಂಡೂರು-ಬಳ್ಳಾರಿಯ ಸಾವಿರಾರು ಜನ ಸೈಕಲ್ ಮೇಲೆ ಬೆಂಗಳೂರು ಚಲೋ ಹೋರಾಟ ಮಾಡಿದ್ದರು. 1994ರಲ್ಲಿ ಸಜ್ಜನ್ ಜಿಂದಾಲ್ ಉಕ್ಕಿನ ಕಾರ್ಖಾನೆ ಆರಂಭಿಸಿದರು.

ವಿಶ್ವದ ಅಗ್ರ ಕಂಪನಿಗಳಲ್ಲಿ ಒಂದೆಂದು ಹೆಸರಾಗಿರುವ ಜಿಂದಾಲ್ ಕಾರ್ಖಾನೆ ಪ್ರತ್ಯಕ್ಷ-ಪರೋಕ್ಷವಾಗಿ ಲಕ್ಷಾಂತರ ಜನರಿಗೆ ಉದ್ಯೋಗ ನೀಡಿದ್ದು, ಬಿಜೆಪಿ ಆತ್ಮಾವಲೋಕನ ಮಾಡಿಕೊಂಡು ಒಪ್ಪಂದದಂತೆ ಭೂಮಿ ಪರಭಾರೆ ಮಾಡಬೇಕು ಎಂದು ಆಗ್ರಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net