

ಸಂಡೂರು: ತಾಲೂಕಿನ ತಾರಾನಗರ ಗ್ರಾಪಂಗೆ ಕೇಂದ್ರದ ಎನ್‌ಆರ್‌ಎಲ್‌ಎಂ ತಂಡದ ಮುಖ್ಯಸ್ಥ ಡಾ.ದಯಾಕರ್ ಅವರು ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಗ್ರಾಮದ ಅಂಗವಿಕಲರ, ವೃದ್ಧರ, ವಿಧವೆಯರ ಮಾಸಿಕ ಪಿಂಚಣಿ ಸರಿಯಾಗಿ ಪಾವತಿ ಆಗುತ್ತಿದೆಯೇ ಎಂದು ಫಲಾನುಭವಿಗಳನ್ನು ಕೇಳಿದರು.
ನಂತರ ಎನ್‌ಆರ್‌ಎಲ್‌ಎನ್ ಸ್ವಸಹಾಯ ಸಂಘದವರ ಅನುದಾನದ ಕುರಿತು ಮತ್ತು ಸ್ವಸಹಾಯ ಸಂಘದ ಕಾರ್ಯಚಟುವಟಿಕೆಗಳ ಬಗ್ಗೆ ಸಂಘದ ಪ್ರತಿನಿಧಿಗಳೊಂದಿಗೆ ಚರ್ಚಿಸಿದರು.
ನರೇಗಾ ಯೋಜನೆಯಡಿ ಜಾಬ್‌ಕಾರ್ಡ್ ಮತ್ತು ಗ್ರಾಪಂನ ಏಳು ವಹಿಗಳನ್ನು ಪರಿಶೀಲಿಸಿ, ಗ್ರಾ.ಪಂ.ನಲ್ಲಿ ಕಳೆದ ಮೂರು ವರ್ಷಗಳಲ್ಲಿ ಸಾಮಗ್ರಿ ಆಧಾರಿತ ಶಾಲಾ ಆಟದ ಮೈದಾನ, ಕೃಷಿ ಇಲಾಖೆಯಿಂದ ಅನುಷ್ಠಾನಗೊಂಡ ಕಿರು ಕಾಲುವೆ ಹೂಳೆತ್ತುವುದು, ತೋಟಗಾರಿಕೆ ಇಲಾಖೆಯಿಂದ ಅನುಷ್ಠಾನಗೊಂಡ ಬಾಳೆ ತೋಟ, ದನದ ಕೊಟ್ಟಿಗೆ ಕಾಮಗಾರಿಗಳನ್ನು ವೀಕ್ಷಿಸಿ, ಪ್ರಧಾನ ಮಂತ್ರಿ ಆವಾಸ್ ಯೋಜನೆಯ ನಿರ್ಮಾಣ ಹಂತದ ಮನೆಗಳನ್ನು ಹಾಗೂ ಎನ್‌ಆರ್‌ಎಲ್‌ಎಂ ಸಂಘದಿಂದ ಸಾಲ ಪಡೆದು ಅಗರಬತ್ತಿ ತಯಾರಿಸುವುದನ್ನು ಪರಿಶೀಲಿಸಿದರು.