

ಸಂಡೂರು: ಪಟ್ಟಣದ ಶಂಕರ ಮಠದಲ್ಲಿ ತಾಲೂಕು ಬ್ರಾಹ್ಮಣ ಸಮಾಜದ ಮಾರ್ಗದರ್ಶಕ ಮಂಡಳಿ ಹಾಗೂ ಕಾರ್ಯಕಾರಿ ಸಮಿತಿ ಸಭೆ ಸೋಮವಾರ ನಡೆಯಿತು. ಕಾರ್ಯಕಾರಿ ಮಂಡಳಿ ನೂತನ ಅಧ್ಯಕ್ಷ ಗುರುರಾಜ್ ಶರಾಫ್ ಮಾತನಾಡಿ, ಬ್ರಾಹ್ಮಣ ಸಮಾಜದ ಕಷ್ಟಗಳಿಗೆ ಸ್ಪಂದಿಸುವ ಕೆಲಸ ಮಾಡುತ್ತೇನೆ. ವಿವಿಧ ಸರ್ಕಾರಿ ಕಚೇರಿಗಳಲ್ಲಿ ಯಾವುದೇ ಕೆಲಸ ಆಗಬೇಕೆಂದಿದ್ದರೂ ಸ್ಪಂದಿಸುತ್ತೇನೆ ಎಂದರು.
ಮಾರ್ಗದರ್ಶಕ ಮಂಡಳಿ ಅಧ್ಯಕ್ಷರಾಗಿ ಸುಬ್ಬರಾವ್ ಶರಾಫ್, ಉಪಾಧ್ಯಕ್ಷರಾಗಿ ವಿ.ಎಲ್.ಜೋಷಿ, ಸದಸ್ಯರಾಗಿ ಡಾ.ಸಿ.ಆರ್.ಗೋಪಾಲ್, ಡಾ.ಎಸ್.ಜೆ.ಗೋಪಾಲಕೃಷ್ಣ, ಘೋಷಿ ಶ್ರೀನಿವಾಸ್, ಪಾಂಡುರಂಗ ಭಟ್ ರಾಜಪುರೋಹಿತ್, ಸತ್ಯನಾರಾಯಣ ಕುಲಕರ್ಣಿ, ಬ್ರಹ್ಮಾನಂದ ಶಾಸ್ತ್ರಿ, ರವೀಂದ್ರ ಕುಲಕರ್ಣಿ, ಆನಂದ ಕುಲಕರ್ಣಿ, ಕುಮಾರ ಕರ್ಮರ್ಕರ್, ಕಾನೂನು ಸಲಹೆಗಾರರಾಗಿ ಬಿ.ನಾರಾಯಣ್ ಆಚಾರ್ ಸರ್ವಾನುಮತದಿಂದ ಆಯ್ಕೆಯಾದರು.
ಕಾರ್ಯಕಾರಿ ಮಂಡಳಿ ಉಪಾಧ್ಯಕ್ಷರಾಗಿ ಮಧುಸೂದನ, ಕಾರ್ಯದರ್ಶಿಯಾಗಿ ಔದುಂಬರ ಭಟ್, ಜಂಟಿ ಕಾರ್ಯದರ್ಶಿಯಾಗಿ ಎಚ್.ಕೆ.ರಘು, ಖಜಾಂಚಿಯಾಗಿ ಬದರಿನಾರಾಯಣಚಾರ್, ಜಂಟಿ ಖಜಾಂಚಿಯಾಗಿ ಶ್ರೀನಿವಾಸ್ ಕೆ.ಜೋಶಿ, ಸಂಘಟನಾ ಕಾರ್ಯದರ್ಶಿಯಾಗಿ ಬಿ.ವಾದಿರಾಜ್ ಆಚಾರ್, ತಾಂಬ್ರಪರ್ಣಿ ವೆಂಕಟೇಶ್, ಶ್ರೀಪಾದ್ ಕುಲಕರ್ಣಿ, ಪ್ರಶಾಂತ ಕುಲಕರ್ಣಿ ಆಯ್ಕೆಯಾದರು. ಪ್ರಮುಖರಾದ ವಿಜಯೇಂದ್ರರಾವ್, ಎಸ್.ಪಿ.ಪಾಂಡುರಂಗರಾವ್, ಚಿದಂಬರ ನಾನಾವಟೆ, ರಾಘವೇಂದ್ರ ಘೋಷಿ, ಸತೀಶ್ ತಾಂಬ್ರಪರ್ಣಿ ಶ್ರೀಧರ್ ಕುಲಕರ್ಣಿ, ಶಿವಾಜಿ ಭಟ್ ಮಧುಸೂದನ್, ಬ್ರಹ್ಮಾನಂದಶಾಸ್ತ್ರಿ ರವಿಕುಮಾರ್, ಸಂತೋಷ ಇತರರಿದ್ದರು.