ಸ್ಪರ್ಧಾ ಮನೋಭಾವ ಬೆಳೆಸಿಕೊಳ್ಳಲು ಸಲಹೆ

VITARANE
ಸಂಡೂರು ತಾಲೂಕು ಚೋರುನೂರು ಹೋಬಳಿಯ ಜಿ.ಎಲ್.ಹಳ್ಳಿಯಲ್ಲಿ ನಡೆಸಲಾದ ಸ್ಪರ್ಧಾತ್ಮಕ ಪರೀಕ್ಷೆಗಳ ವಿಜೇತರಿಗೆ ತಾಪಂ ಇಒ ಎಚ್.ಷಡಕ್ಷರಯ್ಯ ಗುರುವಾರ ಬಹುಮಾನ ವಿತರಿಸಿದರು. ಸಿಆರ್‌ಪಿ ಓಬಣ್ಣ, ಪಿಡಿಒ ಎಚ್.ನಾಗರಾಜ ಇದ್ದರು.
Published on

ಸಂಡೂರು: ವಿದ್ಯಾರ್ಥಿಗಳು ಸ್ಪರ್ಧಾ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ತಾಪಂ ಇಒ ಎಚ್.ಷಡಕ್ಷರಯ್ಯ ಹೇಳಿದರು.

ತಾಲೂಕಿನ ಚೋರುನೂರು ಹೋಬಳಿಯ ಗೊಲ್ಲಲಿಂಗಮ್ಮಹಳ್ಳಿ ಗ್ರಾಪಂ ವ್ಯಾಪ್ತಿಯ ಯುವಕ-ಯುವತಿಯರಿಗೆ ನಡೆದ ಸ್ಪರ್ಧಾತ್ಮಕ ಪರೀಕ್ಷೆಗಳ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದರು.

ಅಧ್ಯಯನದ ಜತೆಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಕೌಶಲ ರೂಪಿಸಿಕೊಳ್ಳಬೇಕು ಎಂಬ ಕಾರಣಕ್ಕೆ ಗ್ರಾಪಂ ಗ್ರಾಮೀಣ ಮಟ್ಟದಲ್ಲಿ ಪರೀಕ್ಷೆ ಹಮ್ಮಿಕೊಂಡಿರುವುದು ಉತ್ತಮ ಬೆಳವಣಿಗೆ ಎಂದರು.

ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ 29 ಜನ ಯುವಕ-ಯುವತಿಯರು ಭಾಗವಹಿಸಿದ್ದರು. ಎ.ಕೆ. ಹುಲುಗಪ್ಪ ಪ್ರಥಮ, ಗಿರಿಜಮ್ಮ ಎನ್.ಪ್ರಕಾಶ ದ್ವಿತೀಯ, ಎಸ್.ಮೂರ್ತಿ ತೃತೀಯ ಸ್ಥಾನ ಪಡೆದರು. ವಿಜೇತರಿಗೆ ಕ್ರಮವಾಗಿ 3 ಸಾವಿರ ರೂ, 2 ಸಾವಿರ ರೂ, 1 ಸಾವಿರ ರೂ. ನಗದು ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಸ್ಪರ್ಧಿಸಿದ ಎಲ್ಲರಿಗೂ ಸ್ಪರ್ಧಾ ಕೈಪಿಡಿಗಳನ್ನು ನೀಡಲಾಯಿತು.

ಜಿ.ಎಲ್.ಹಳ್ಳಿ ಕ್ಲಸ್ಟರ್‌ನ ಶಿಕ್ಷಕರು ಪ್ರಶ್ನೆ ಪತ್ರಿಕೆಗಳನ್ನು ರಚಿಸಿದ್ದರು. ಸಿಆರ್‌ಪಿ ಓಬಣ್ಣ, ಪಿಡಿಒ ಎಚ್.ನಾಗರಾಜ ಮಾತನಾಡಿದರು. ತಾಪಂ ಎಡಿಗಳಾದ ರೇಣುಕಾಚಾರ್ಯ ಸ್ವಾಮಿ, ಎ.ಕೆ.ದುರುಗಪ್ಪ, ಗ್ರಾಪಂ ಅಧ್ಯಕ್ಷೆ ಪಾರ್ವತಮ್ಮ, ಮಾಜಿ ಅಧ್ಯಕ್ಷೆ ತಿಮ್ಮಕ್ಕ, ಸದಸ್ಯರು, ಊರಿನ ಮುಖಂಡರಿದ್ದರು. ಯರದಮ್ಮನಹಳ್ಳಿ ಶಾಲೆ ಮುಖ್ಯಶಿಕ್ಷಕ ಕೆ.ರವಿ, ಎ.ಕೆ.ಹುಲುಗಪ್ಪ, ಭಾಗ್ಯಶ್ರೀ ಕಾರ್ಯಕ್ರಮ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net