ಡಾ.ಬಿ.ಆರ್.ಅಂಬೇಡ್ಕರ್ ಅಂತ್ಯಕ್ರಿಯೆಗೆ ಕಾಂಗ್ರೆಸ್ ಜಾಗ ಕೊಡಲಿಲ್ಲವೆಂದು ಬಿಜೆಪಿ ತಾಲೂಕು ಅಧ್ಯಕ್ಷ ಜಿ.ಟಿ.ಪಂಪಾಪತಿ ಆರೋಪ

13042022 Sandur Blood donete
Published on


ಸಂಡೂರು: ಡಾ.ಬಿ.ಆರ್.ಅಂಬೇಡ್ಕರ್ ವ್ಯಾಪಕ ಶೋಷಣೆ ಅನುಭವಿಸಿದ್ದಾರೆ ಎಂದು ಜಿ.ಟಿ.ಪಂಪಾಪತಿ ಹೇಳಿದರು.

ಪಟ್ಟಣದ ಪುರಸಭೆ ಬಸ್ ನಿಲ್ದಾಣದ ಹಿಂಭಾಗದಲ್ಲಿ ಎಸ್ಟಿ ಮೋರ್ಚಾ 42ನೇ ಸಂಸ್ಥಾಪನಾ ದಿನ ಹಾಗೂ ಡಾ.ಅಂಬೇಡ್ಕರ್‌ರ 131ನೇ ಜನ್ಮದಿನದ ಪ್ರಯುಕ್ತ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರಕ್ಕೆ ಬುಧವಾರ ಚಾಲನೆ ನೀಡಿ ಮಾತನಾಡಿದರು. ಅಂಬೇಡ್ಕರ್‌ರ ವಿದೇಶದಲ್ಲಿ ಓದಿ ಸಾಕಷ್ಟು ಹೆಸರು ಮಾಡಿದ್ದರೂ ಭಾರತದಲ್ಲಿ ಮಾತ್ರ ಅವರು ಶೋಷಣೆಗೊಳಪಟ್ಟರು. ಅಂಬೇಡ್ಕರ್ ನಿಧನರಾದಾಗ ಅವರನ್ನು ಹೂಳಲೂ ಜಾಗ ಕೊಡದೆ ಅಂದಿನ ಕಾಂಗ್ರೆಸ್ ಸರ್ಕಾರ ಬಾಂಬೆಗೆ ಕೊಂಡೊಯ್ಯುವಂತೆ ಮಾಡಿತು ಎಂದು ಟೀಕಿಸಿದರು.

ಎಸ್ಟಿ ಮೋರ್ಚಾ ತಾಲೂಕು ಅಧ್ಯಕ್ಷ ಪರಶುರಾಮ ಪೂಜಾರ್ ಅಧ್ಯಕ್ಷತೆ ವಹಿಸಿದ್ದರು. ರಾಮಾಂಜಿನಪ್ಪ ನಾಗೇನಹಳ್ಳಿ, ಆರ್.ನರಸಿಂಹ, ಗುರುಸ್ವಾಮಿ ಯರ‌್ರಯ್ಯನಹಳ್ಳಿ, ಉಬ್ಬಲಗಂಡಿ ಹೊನ್ನೂರಸ್ವಾಮಿ, ಮೋರ್ಚಾಗಳ ಅಧ್ಯಕ್ಷರಾದ ಶರಣನಗೌಡ, ಸತೀಶ್ ಹೆಗಡೆ, ಪಕ್ಷದ ಮುಖಂಡರಾದ ಯು.ಕಿನ್ನೂರೇಶ್ವರ, ಬಿ.ಮಂಜುನಾಥ, ಪುಷ್ಪಾ ಪಂಪನಗೌಡ, ಸರಿತಾ, ಶೋಭನಾ, ರವಿಕಾಂತ್ ಬೋಂಸ್ಲೆ, ವಿಜಯಕುಮಾರ್, ವಿಶ್ವನಾಥ ಬೋಸ್ಲೆ, ಆನಂದಪ್ಪ ಮುರಾರಿಪುರ, ಬಿ.ಶಂಕರ್, ಕಾರ್ತಿಕ್, ಶೇಖರ್, ವೆಂಕಟಸುಬ್ಬಯ್ಯ, ವಿಶ್ವನಾಥರೆಡ್ಡಿ, ಕೆ.ಮುರುಗೇಶ್, ಭೀಮಲಿಂಗಪ್ಪ, ಒಂಕಾರಪ್ಪ ಸ್ವಾಮಿಹಳ್ಳಿ, ಎರ‌್ರಿಸ್ವಾಮಿ ಸೋಮಲಾಪುರ, ದೇವೇಂದ್ರಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net