ಷರೀಫ, ಗೋವಿಂದಭಟ್ಟರ ಸಂಬಂಧ ಗಾಢ

170522 Sanduru Datti upanysa
ಸಂಡೂರಿನ ಸರ್ಕಾರಿ ಐಟಿಐ ಕಾಲೇಜಿನಲ್ಲಿ ಮಂಗಳವಾರ ಆಯೋಜಿಸಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಶಶಿಕಲಾ ಚಂದ್ರಶೇಖರಪ್ಪ ಅವರನ್ನು ಸನ್ಮಾನಿಸಲಾಯಿತು.
Published on

ಸಂಡೂರು: ಸಂತ ಶಿಶುನಾಳ ಷರೀಫರು, ಅವರ ಗುರು ಗೋವಿಂದ ಬಟ್ಟರು ಅನುಭಾವ ಸಾಹಿತ್ಯದ ಮೂಲಕ ಪ್ರವರ್ಧಮಾನಕ್ಕೆ ಬಂದವರು ಎಂದು ಛತ್ರಪತಿ ಶಿವಾಜಿ ವಿದ್ಯಾಮಂದಿರದ ಶಿಕ್ಷಕಿ ಶಶಿಕಲಾ ಚಂದ್ರಶೇಖರಪ್ಪ ಅಭಿಪ್ರಾಯಪಟ್ಟರು.

ಕಸಾಪ ತಾಲೂಕು ಘಟಕದಿಂದ ಪಟ್ಟಣದ ಸರ್ಕಾರಿ ಐಟಿಐ ಕಾಲೇಜಿನಲ್ಲಿ ಮಂಗಳವಾರ ಯೋಜಿಸಿದ್ದ ದಿ.ಗುಡೇಕೋಟೆ ಚಿನ್ನಪ್ಪ, ದಿ.ಗುರುಸಿದ್ದಮ್ಮ ದತ್ತಿ, ಎಂ.ಸೋಮಪ್ಪ ದತ್ತಿ, ಲಾಳಗೊಂಡರ ದೊಡ್ಡಬಸಪ್ಪ ದತ್ತಿ, ಸಂಡೂರು ತಾಲೂಕು ಕುರುಬರ ಸಂಘದ ದತ್ತಿ ಉಪನ್ಯಾಸವನ್ನು ಉದ್ದೇಶಿಸಿ ಕನ್ನಡದಲ್ಲಿ ಅನುಭಾವ ಸಾಹಿತ್ಯದ ಬಗ್ಗೆ ಮಾತನಾಡಿದರು.

ಶಿಶಿನಾಳ ಷರೀಫ ಹಾಗೂ ಗುರು ಗೋವಿಂದ ಭಟ್ಟರ ನಡುವೆ ಅವಿನಾಭಾವ ಸಂಬಂಧವಿತ್ತು. ‘ಕೋಡಗನ ಕೋಳಿ ನುಂಗಿತ್ತ…’ಎಂಬ ಹಾಡಿನಲಿ ಗುರುವಿನ ಪಾದದ ಮಹತ್ವವನ್ನು ಷರೀಫರು ಒಗಟಾಗಿ ಹೇಳಿದ್ದಾರೆ ಎಂದರು.

ಅತ್ಯಂತ ಕಡಿಮೆ ವಯಸ್ಸಿನಲ್ಲಿ ಹೃದಯಾಘಾತದಿಂದ ನಿಧನರಾದ ಪುನೀತ್ ರಾಜ್‌ಕುಮಾರ್ ಅವರು ನಡೆಸುತ್ತಿದ್ದ ಅನಾಥಶ್ರಮ, ಅಬಲಾಶ್ರಮಗಳ ವಿಷಯ ಬೆಳಕಿಗೆ ಬಂತು. ಸಹಾಯ ಮಾಡಿದ್ದು ಮತ್ತೊಬ್ಬರಿಗೆ ಗೊತ್ತಾಗಬಾರದು ಎಂದು ಅವರ ತಂದೆ ಡಾ.ರಾಜಕುಮಾರ್ ಹೇಳಿದಂತೆ ಅಪ್ಪು ನಡೆದುಕೊಂಡಿದ್ದರು ಎಂದರು.

ಪ್ರಮುಖರಾದ ಗುಡೇಕೋಟೆ ನಾಗರಾಜ ಮಾತನಾಡಿ, ಟೆಕ್ನಿಕಲ್ ಸ್ಟೂಂಡೆಂಟ್ಸ್‌ಗೆ ಅನುಭಾವ ಸಾಹಿತ್ಯದ ಮೂಲಕ ಉಣಬಡಿಸಿದ ಕೀರ್ತಿ ಶಶಿಕಲಾ ಅವರಿಗೆ ಸಲ್ಲುತ್ತದೆ. ಪ್ರತಿಯೊಬ್ಬರೂ ನಿಮ್ಮ ಜನ್ಮದಿನದಂದು ಕಸಾಪದ ಮೂಲಕ ಪುಸ್ತಗಳನ್ನು ಖರೀದಿಸಬೇಕು. ಅದೇರೀತಿ ಕನ್ನಡ ನುಡಿ ಪುಸ್ತಕಕ್ಕೆ ಚಂದಾದಾರರಾಗಿ ನಮ್ಮ ನೆಲ, ಜಲಕ್ಕಾಗಿ ಕೊಡುಗೆಯಾಗಿ ನೀಡಬೇಕು ಎಂದರು. ನೀಲಾಂಬಿಕಾ ನಿರೂಪಿಸಿದರು. ಜಿ.ಆರ್.ಮಲ್ಲಿಕಾರ್ಜುನ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net