ಮಾನವೀಯ ಮೌಲ್ಯ ಬೆಳೆಸಿ

Sandur farewell program
ಸಂಡೂರಿನ ಲಕ್ಷ್ಮೀ ಎಸ್.ನಾನಾವಟೆ ಶಿಕ್ಷಣ ಕಾಲೇಜಿನ ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಆಡಳಿತಾಧಿಕಾರಿ ಕುಮಾರ್ ಎಸ್.ನಾನಾವಟೆ ಮಾತನಾಡಿದರು. ಪ್ರಾಚಾರ್ಯ ಯು.ದೇವರಾಜ್, ಆಡಳಿತಾಧಿಕಾರಿ ಆಪ್ತ ಸಹಾಯಕ ಎಂ.ಜಿ.ಶರಣಬಸಪ್ಪ ಇತರರಿದ್ದರು.
Published on

ಸಂಡೂರು: ಸಮಾಜದಲ್ಲಿ ಪವಿತ್ರವಾದ ಕರ್ತವ್ಯ ಎಂದರೆ ಶಿಕ್ಷಕ ವೃತ್ತಿ. ಸಾವಿರಾರು ವಿದ್ಯಾರ್ಥಿಗಳು ಶಿಕ್ಷಣ ಪಡೆದು ಸಮಾಜದಲ್ಲಿ ಮಾದರಿ ವ್ಯಕ್ತಿಗಳಾಗಿ ಹೊರಹೊಮ್ಮಲಿ ಎಂದು ಶ್ರೀಶೈಲೇಶ್ವರ ವಿದ್ಯಾ ಕೇಂದ್ರದ ಆಡಳಿತಾಧಿಕಾರಿ ಕುಮಾರ್ ಎಸ್.ನಾನಾವಟೆ ತಿಳಿಸಿದರು.

ಪಟ್ಟಣದ ಶ್ರೀಶೈಲೇಶ್ವರ ವಿದ್ಯಾ ಕೇಂದ್ರದ ಲಕ್ಷ್ಮೀ ಎಸ್. ನಾನಾವಟೆ ಶಿಕ್ಷಣ ಮಹಾವಿದ್ಯಾಲಯದಲ್ಲಿ ಬುಧವಾರ ಹಮ್ಮಿಕೊಂಡಿದ್ದ ದ್ವಿತೀಯ ವರ್ಷದ ಪ್ರಶಿಕ್ಷಣಾರ್ಥಿಗಳಿಗೆ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಮಾತನಾಡಿದರು. ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು. ವಿದ್ಯಾರ್ಥಿಗಳಲ್ಲಿ ಉತ್ತಮ ಜ್ಞಾನದ ಜತೆ ಮಾನವೀಯ ಮೌಲ್ಯಗಳನ್ನು ಬೆಳೆಸಬೇಕು. ವಿದ್ಯಾರ್ಥಿಗಳ ಭವಿಷ್ಯ ಶಿಕ್ಷಕರ ಕೈಯಲ್ಲಿದೆ ವಿದ್ಯಾರ್ಥಿಗಳ ಗುರಿ ಸಾಧಿಸಲು ಶಿಕ್ಷಕರು ಹಗಲಿರುಳು ಸೇವೆ ಸಲ್ಲಿಸಬೇಕು ಎಂದು ತಿಳಿಸಿದರು.

ಆಡಳಿತಾಧಿಕಾರಿಗಳ ಆಪ್ತ ಸಹಾಯಕ ಎಂ.ಜಿ.ಶರಣಬಸಪ್ಪ ಮಾತನಾಡಿ, ಭವ್ಯ ಭಾರತದ ನಿರ್ಮಾಣಕ್ಕೆ ಮಕ್ಕಳ ಸವಾರ್ಂಗೀಣ ಬೆಳವಣಿಗೆಗೆ ಶ್ರಮಿಸಬೇಕು. ಶಿಕ್ಷಕರು ವಿದ್ಯಾರ್ಥಿಗಳ ಮನಸ್ಸನ್ನು ಅರಿತು ಬೋಧಿಸಬೇಕು. ವಿದ್ಯಾರ್ಥಿಗಳು ಪಾಲಕರಿಗೆ ಹೇಳದ ಎಷ್ಟೋ ವಿಚಾರ ಶಿಕ್ಷಕರ ಜತೆ ಹಂಚಿಕೊಳ್ಳುತ್ತಾರೆ. ಪಾಶ್ಚಾತ್ಯ ಸಂಸ್ಕೃತಿಗೆ ಮಾರು ಹೋಗದೆ ಭಾರತೀಯ ಸಂಸ್ಕೃತಿ ಕಲಿಯಬೇಕು ಎಂದರು. ಪ್ರಾಚಾರ್ಯ ಯು.ದೇವರಾಜ್, ಉಪನ್ಯಾಸಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net