ಕಣ್ಣಿನ ದೋಷಕ್ಕೆ ವೈದ್ಯರ ಸಲಹೆ ಅಗತ್ಯ; ಜಿಂದಾಲ್ ಆಸ್ಪತ್ರೆಯ ಮುಖ್ಯಸ್ಥ ಎಸ್.ಪಿ.ಸಿಂಗ್ ಅನಿಸಿಕೆ

03122022 sandur eye camp
Published on

ಸಂಡೂರು: ಮಾನವನ ದೇಹದಲ್ಲಿ ಕಣ್ಣು ಅತ್ಯಂತ ಸೂಕ್ಷ್ಮವಾದ ಅಂಗವಾಗಿದ್ದು ತುಂಬಾ ಮುತುವರ್ಜಿಯಿಂದ ನೋಡಿಕೊಳ್ಳಬೇಕು ಎಂದು ಜಿಂದಾಲ್ ಸಂಜೀವಿನಿ ಆಸ್ಪತ್ರೆಯ ಮುಖ್ಯಸ್ಥ ಎಸ್.ಪಿ.ಸಿಂಗ್ ಹೇಳಿದರು.

ತಾಲೂಕಿನ ಉಬ್ಬಲಗಂಡಿ ಗ್ರಾಮದ ಸಹಿಪ್ರಾಶಾಲೆಯಲ್ಲಿ ಜೆಎಸ್‌ಡಬ್ಲುೃ ಫೌಂಡೇಷನ್‌ನಿಂದ ಶುಕ್ರವಾರ ನಡೆದ ನೇತ್ರ ತಪಾಸಣೆ, ಉಚಿತ ಕನ್ನಡಕ ವಿತರಣೆ, ಕಣ್ಣಿನ ಪೊರೆ ಚಿಕಿತ್ಸಾ ಶಿಬಿರ ಉದ್ದೇಶಿಸಿ ಮಾತನಾಡಿದರು. ಕಣ್ಣಿನ ವಿಷಯದಲ್ಲಿ ಸೂಕ್ತ ಚಿಕಿತ್ಸೆ ಹಾಗೂ ವೈದ್ಯರ ಸಲಹೆಯನ್ನು ಕೂಡಲೇ ಪಡೆಯಬೇಕು ಎಂದರು. ಸುಮಾರು 150ಕ್ಕೂ ಹೆಚ್ಚು ಗ್ರಾಮಸ್ಥರು ಹಾಗೂ ಟ್ರಕ್ ಚಾಲಕರು ಶಿಬಿರದ ಪ್ರಯೋಜನ ಪಡೆದುಕೊಂಡರು.

ಗಣಿ ವಿಭಾಗದ ಉಪಾಧ್ಯಕ್ಷ ಸುನಿಲ್‌ಸಿಂಗ್, ಜಿಂದಾಲ್ ಆಡಳಿತ ವಿಭಾಗದ ಹಿರಿಯ ಉಪಾಧ್ಯಕ್ಷ ಸುನೀಲ್ ರಾಲ್ಫ್, ಮತ್ತು ಫೌಂಡೇಷನ್ ಮುಖ್ಯಸ್ಥ ಪೆದ್ದಣ್ಣ, ಹಿರಿಯ ವ್ಯವಸ್ಥಾಪಕ ಶಿವಕುಮಾರ ಮಾಳಗಿ, ದೇವರಾಜ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net