ಪಂಪ್‌ಸೆಟ್‌ಗಳಿಗೆ ಹಗಲು ವಿದ್ಯುತ್ ಸರಬರಾಜು ಮಾಡುವಂತೆ ಕುರೇಕುಪ್ಪ ರೈತರ ಒತ್ತಾಯ

010122 Kurekoppa Farmers Appeal
ಪಂಪ್‌ಸೆಟ್‌ಗಳಿಗೆ ಹಗಲು ವಿದ್ಯುತ್ ಸರಬರಾಜು ಮಾಡುವಂತೆ ಒತ್ತಾಯಿಸಿ ಸಂಡೂರು ತಾಲೂಕು ಕುರೇಕುಪ್ಪ ರೈತರು ತೋರಣಗಲ್ ಜೆಸ್ಕಾಂ ಕಚೇರಿ ಮೇಲ್ವಿಚಾರಕ ಕಾಳಪ್ಪಗೆ ಮನವಿ ಸಲ್ಲಿಸಿದರು.
Published on

ಸಂಡೂರು: ಪಂಪ್‌ಸೆಟ್‌ಗಳ ಸಹಾಯದಿಂದ ಜಮೀನುಗಳಿಗೆ ನೀರು ಹರಿಸಲು ಹಗಲು ವಿದ್ಯುತ್ ಸರಬರಾಜು ಅಗತ್ಯವಿದ್ದು, ಅನುಕೂಲ ಮಾಡಿಕೊಡುವಂತೆ ಕರ್ನಾಟಕ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ಕುರೇಕುಪ್ಪ ರೈತರು ತೋರಣಗಲ್ ಜೆಸ್ಕಾಂ ಕಚೇರಿ ಮುಂದೆ ಶನಿವಾರ ಪ್ರತಿಭಟನೆ ನಡೆಸಿದರು.

ಕಪ್ರಾರೈಸಂ ಗ್ರಾಮ ಘಟಕ ಅಧ್ಯಕ್ಷ ಜಿ.ಪಂಪನಗೌಡ ಮಾತನಾಡಿ, ಸಂಜೆ 4ರಿಂದ 3ಫೇಸ್ ವಿದ್ಯುತ್ ಸರಬರಾಜು ಮಾಡಲಾಗುತ್ತಿದ್ದು ಕೆಲವೊಮ್ಮೆ 6ಗಂಟೆಗೆ ವಿದ್ಯುತ್ ಸರಬರಾಜು ಮಾಡಲಾಗುತ್ತದೆ. ಇದರಿಂದ ಮಧ್ಯರಾತ್ರಿ 12-1 ಗಂಟೆವರೆಗೆ ರೈತರು ಜಮೀನಿನಲ್ಲಿ ಇದ್ದು, ಬೆಳೆಗಳಿಗೆ ನೀರು ಹರಿಸಬೇಕಾಗುತ್ತದೆ. ಇತ್ತೀಚೆಗೆ ಕುರೇಕುಪ್ಪ ಸುತ್ತಮುತ್ತ ಚಿರತೆ, ಕರಡಿಗಳ ಹಾವಳಿ ಅಧಿಕವಾಗಿದ್ದು, ರೈತರು ಜಮೀನಿನಲ್ಲಿ ನೀರು ಹಾಯಿಸಲು ಹೆದರುವಂತಾಗಿದೆ. ಡಿ.22ರ ಸಂಜೆ ಕುರೇಕುಪ್ಪದ ಎರಡನೇ ವಾರ್ಡ್‌ನ ಚಿಕ್ಕಗುಡ್ಡದಲ್ಲಿ ಚಿರತೆ ಕಾಣಿಸಿಕೊಂಡಿತ್ತು. ಹೀಗಾಗಿ ಭಯದ ವಾತಾವರಣ ಸೃಷ್ಟಿಯಾಗಿದ್ದು, ಬೆಳಗ್ಗೆ 6ರಿಂದ ಮಧ್ಯಾಹ್ನ 1ರವರೆಗೆ ಇಲ್ಲವೆ, ಬೆಳಗ್ಗೆ 10ರಿಂದ ಸಂಜೆ 5ರವರೆಗೆ ರೈತರ ಪಂಪ್‌ಸೆಟ್‌ಗಳಿಗೆ 3 ಫೇಸ್ ವಿದ್ಯುತ್ ಸರಬರಾಜು ಮಾಡಬೇಕೆಂದು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net