ಲಸಿಕೆಯಿಂದ ವಂಚಿತರಾಗದಂತೆ ಜಾಗ್ರತೆ ವಹಿಸಲು ತೋರಣಗಲ್ ಆಸ್ಪತ್ರೆ ವೈದ್ಯಾಧಿಕಾರಿ ಗೋಪಾಲರಾವ್ ಸಲಹೆ

260222 Sanduru Pulse Polio meeting
ಸಂಡೂರು ತಾಲೂಕು ತೋರಣಗಲ್‌ನ ಸರ್ಕಾರಿ ಆಸ್ಪತ್ರೆಯಲ್ಲಿ ಅಂಗನವಾಡಿ, ಆಶಾ, ಹಾಗೂ ಆರೋಗ್ಯ ಕಾರ್ಯಕರ್ತೆಯರಿಗೆ ಸಲಹೆ ನೀಡಲಾಯಿತು.
Published on

ಸಂಡೂರು: ಪಲ್ಸ್ ಪೋಲಿಯೋ ಕಾರ್ಯಕ್ರಮ ಫೆ.27ರಂದು ನಡೆಯಲಿದ್ದು, ಯಾವುದೇ ಮಗು ಲಸಿಕೆಯಿಂದ ವಂಚಿತವಾಗದಂತೆ ಜಾಗ್ರತೆ ವಹಿಸಬೇಕು ಎಂದು ತೋರಣಗಲ್ ಆಸ್ಪತ್ರೆ ವೈದ್ಯಾಧಿಕಾರಿ ಗೋಪಾಲರಾವ್ ಹೇಳಿದರು.

ತೋರಣಗಲ್‌ನ ಸರ್ಕಾರಿ ಆಸ್ಪತ್ರೆಯಲ್ಲಿ ಅಂಗನವಾಡಿ, ಆಶಾ, ಹಾಗೂ ಆರೋಗ್ಯ ಕಾರ್ಯಕರ್ತೆಯರಿಗೆ ಶನಿವಾರ ಆಯೋಜಿಸಿದ್ದ ಪಲ್ಸ್ ಪೋಲಿಯೋ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ನಿಗದಿಪಡಿಸಿದ ಎಲ್ಲ ಮನೆಗಳಿಗೆ ಕಡ್ಡಾಯವಾಗಿ ಭೇಟಿ ನೀಡಿ ಲಸಿಕೆ ಪಡೆಯಲು ಪ್ರೋತ್ಸಾಹಿಸಬೇಕು ಎಂದರು.

ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಶಕೀಲ್ ಅಹ್ಮದ್, ನಿಜಾಮುದ್ದೀನ್, ಯರ‌್ರಿಸ್ವಾಮಿ, ಸತ್ಯಮ್ಮ, ನಾಗರತ್ನಮ್ಮ, ಶೂಫಿಶರ್ಮಾ, ಬಸವರಾಜ, ಅಂಗನವಾಡಿ ಕಾರ್ಯಕರ್ತೆ ಅರುಣಾ, ಪ್ರೇಮಾ, ತಿಮ್ಮಕ್ಕ, ಆಶಾ ಕಾರ್ಯಕರ್ತೆ ಬಸಮ್ಮ, ಲಕ್ಷ್ಮೀ, ನೀಲಮ್ಮ, ಹನುಮಂತಮ್ಮ, ಮಾಂತಮ್ಮ ಇತರರಿದ್ದರು.

ತರಬೇತಿ: ತಾಲೂಕಿನ ಜಿಂದಾಲ್ ಕಾರ್ಖಾನೆಯ ನಾಲ್ಕು ಟೌನ್‌ಷಿಪ್‌ಗಳಾದ ಎಸ್.ಜಿ.ಕಾಲನಿ, ವಿದ್ಯಾನಗರ, ವಿವಿನಗರ, ಎಚ್‌ಎಸ್‌ಟಿ ಕಾಲನಿಗಳಲ್ಲಿ ಮಕ್ಕಳಿಗೆ ಲಸಿಕೆ ನೀಡಲು ಜಿಂದಾಲ್‌ನ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳಿಗೆ ಇದೇ ಸಂದರ್ಭ ತರಬೇತಿ ನೀಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net