ಕೆಲಸದ ಅವಧಿ ಹೆಚ್ಚಳಕ್ಕೆ ಕಾರ್ಮಿಕರ ಖಂಡನೆ

1-SanduruP1
Published on

ಸಂಡೂರು: ದಿನದ ಕೆಲಸದ ಅವಧಿ 12ಗಂಟೆಗೆ ಹೆಚ್ಚಿಸಿರುವುದನ್ನು ಖಂಡಿಸಿ ಕುಡುತಿನಿ ಥರ್ಮಲ್ ಪವರ್ ಸ್ಟೇಷನ್ ಮುಂದೆ ಬಿಟಿಪಿಎಸ್ ಗುತ್ತಿಗೆ ಕಾರ್ಮಿಕರ ಸಂಘದಿಂದ ಬುಧವಾರ ಪ್ರತಿಭಟನೆ ನಡೆಸಿ ಪವರ್ ಸ್ಟೇಷನ್ ಎಚ್‌ಆರ್‌ಡಿ ಉಮೇಶ್ ಹಾಗೂ ಗಂಗೂಬಾಯಿ ಮನವಿ ಸಲ್ಲಿಸಲಾಯಿತು.

ರಾಜ್ಯದ ಕಾರ್ಖಾನೆಗಳಲ್ಲಿ ದಿನದ ಕೆಲಸದ ಅವಧಿಯನ್ನು 9ರಿಂದ 12ಗಂಟೆಗೆ ಹೆಚ್ಚಿಸಿದ್ದಲ್ಲದೆ ರಾತ್ರಿ ಪಾಳಿಯಲ್ಲಿ ಮಹಿಳೆಯರನ್ನು ದುಡಿಸಿಕೊಳ್ಳಲು ಅವಕಾಶ ಕಲ್ಪಿಸಿ ಕಾರ್ಖಾನೆ ಕಾಯ್ದೆ 1948ಕ್ಕೆ ತಿದ್ದುಪಡಿ ಮಾಡಿರುವುದು ಕಾರ್ಮಿಕ ವಿರೋಧಿ ನೀತಿಯಾಗಿದೆ. ಚುನಾವಣೆ ಹೊಸ್ತಿಲಲ್ಲಿ ಬಂಡವಾಳಿಗರ ಪರ ನಿಲುವು ತಾಳಿರುವ ರಾಜ್ಯ ಸರ್ಕಾರದ ಕ್ರಮ ಖಂಡನಾರ್ಹ. 5ಗಂಟೆ ವಿರಾಮವಿಲ್ಲದೆ ದುಡಿಯುವ ಕಾರ್ಮಿಕರಿಗೆ ಕನಿಷ್ಠ 30 ನಿಮಿಷ ವಿರಾಮ ನೀಡಬೇಕು. ಆದರೆ ವಿರಾಮ ಕೊಡದೇ 12ಗಂಟೆ ದುಡಿಸಿಕೊಳ್ಳುವುದು ಯಾವ ನ್ಯಾಯ. ಕಾಯ್ದೆ ಜಾರಿಯಿಂದ ಮಹಿಳೆಯರು ಸುರಕ್ಷತೆ, ಕೆಲಸದ ಅಭದ್ರತೆ, ಸಾರಿಗೆ ಸೇವಾ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಕೂಡಲೇ ನೂತನ ಆದೇಶ ಹಿಂಪಡೆದು ದಿನಕ್ಕೆ 7ಗಂಟೆಯಂತೆ ವಾರಕ್ಕೆ 35ಗಂಟೆ ಕೆಲಸದ ಅವಧಿ ನಿಗದಿಪಡಿಸಬೇಕು ಎಂದು ಒತ್ತಾಯಿಸಿದರು.

ಸಂಘದ ಅಧ್ಯಕ್ಷ ತಿಪ್ಪೇಸ್ವಾಮಿ ಮಳಿಮಠ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜೆ.ಎಂ.ಚನ್ನಬಸಯ್ಯ, ಕಾರ್ಯದರ್ಶಿ ಕೆ.ಮಲಿಯಪ್ಪ, ಅಂಜಿನಿ, ಶಿವಕುಮಾರ, ರುದ್ರಮ್ಮ, ಚಂದ್ರಮ್ಮ, ಮಲ್ಲಮ್ಮ, ಹುಚ್ಚಮ್ಮ, ಹನುಮಂತಮ್ಮ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net