

ಸಂಡೂರು: ನರೇಗಾ ಕಾಮಗಾರಿ ಕೂಲಿ ಹಣ 349 ರಿಂದ 370 ರೂ.ಗೆ ಹೆಚ್ಚಳ ಮಾಡುವುದರೊಂದಿಗೆ ಅಂಗವಿಕಲರಿಗೆ ಕೆಲಸ ನೀಡಲಾಗುವುದು. ಎನ್‌ಎಂಎಂಎಸ್ ಹಾಜರಾತಿ ಹಾಕಲಾಗುತ್ತದೆ ಎಂದು ತಾಪಂ ಪ್ರಭಾರ ಇಒ ರೇಣುಕಾಚಾರ್ಯ ಸ್ವಾಮಿ ತಿಳಿಸಿದರು.
ಪಟ್ಟಣದ ತಾಪಂ ಸಭಾಂಗಣದಲ್ಲಿ ಅಂಗವಿಕಲರಿಗೆ ನರೇಗಾ ಯೋಜನೆಯಡಿ ಸಿಗುವ ಸೌಲಭ್ಯಗಳ ಕುರಿತು ಶನಿವಾರ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದರು. ತಾಲೂಕಿನಲ್ಲಿ ಒಟ್ಟು 546 ಅಂಗವಿಕಲರು ನರೇಗಾ ಯೋಜನೆಯಡಿ ಹೆಸರು ನೋಂದಣಿ ಮಾಡಿಕೊಂಡಿದ್ದು, 2024-25 ನೇ ಸಾಲಿನಲ್ಲಿ 245 ಅಂಗವಿಕಲರಿಗೆ ಕೆಲಸ ನಿರ್ವಹಿಸಿ ಒಟ್ಟು 6,192 ಮಾನವ ದಿನಗಳನ್ನು ಸೃಜನೆ ಮಾಡಲಾಗಿದೆ. 2025 26ನೇ ಸಾಲಿನಲ್ಲಿ ಒಟ್ಟು 546 ಅಂಗವಿಕಲರಿಗೆ ಕೆಲಸ ನೀಡುವ ಗುರಿ ಹೊಂದಲಾಗಿದೆ. ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸಕ್ಕೆ ನಮೂನೆ 6 ಸಲ್ಲಿಸಲು ಸೂಚಿಸಿದರು.
ತಾಪಂ ಸಹಾಯಕ ನಿರ್ದೇಶಕ ಮಹೇಶ ಕುಮಾರ್, ಎಂಆರ್‌ಡಬ್ಲುೃ ಕರಿಬಸಜ್ಜ, ಎನ್‌ಆರ್‌ಎಲ್‌ಎಂ ಯೋಜನಾ ವ್ಯವಸ್ಥಾಪಕ ಸೋಮಶೇಖರ, ತಾಲೂಕು ಐಇಸಿ ಸಂಯೋಜಕ ಯಂಕಪ್ಪ , ತಾಲೂಕಿನ ಎಲ್ಲ ವಿಆರ್.ಡಬ್ಲುೃ ಇದ್ದರು.